` ನಟಿ ಚೈತ್ರಾ ಹಳ್ಳಿಕೇರಿ ಕುಟುಂಬದಲ್ಲಿ ಹೊಡೆದಾಟ..ಬಡಿದಾಟ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
actress chaitra hallikere image clicked by kmveeresh
Chaitra Hallikere Image

ಚೈತ್ರಾ ಹಳ್ಳಿಕೇರಿ. ಖುಷಿ, ಶಿಷ್ಯ, ಗುನ್ನ ಮೊದಲಾದ ಚಿತ್ರಗಳ ನಾಯಕಿ. ಅರ್ಥ ಮಾಡ್ಕೊಳೋ.. ನನ್ ಅರ್ಥ ಮಾಡ್ಕೊಳೋ.. ಕಳ್ಳ ಚಂದಮಾಮ.. ಮೊದಲಾದ ಹಾಡುಗಳನ್ನು ನೆನಪಿಸಿಕೊಂಡರೆ ಈ ಚೈತ್ರಾ ಹಳ್ಳಿಕೇರಿ ನೆನಪಿಗೆ ಬರ್ತಾರೆ. ಇವರು 12 ವರ್ಷಗಳ ಹಿಂದೆ ಪೋತರಾಜ್ ಎಂಬ ಉದ್ಯಮಿಯನ್ನು ಮದುವೆಯಾಗಿದ್ದರು. ಈಗ ಅವರ ಕುಟುಂಬದಲ್ಲಿ ಬಿರುಗಾಳಿ ಬೀಸಿದೆ.

chaitra_hallikere_parents_1.jpgಮದುವೆ ನಂತರ ನಟನೆ ಬಿಡಬೇಕು ಎಂದಿದ್ದರು. ನಾನು ಬಿಟ್ಟಿದ್ದೆ. ಆದರೆ, ನನ್ನ ಖರ್ಚಿಗೂ ಹಣ ಕೊಡ್ತಾ ಇರಲಿಲ್ಲ. ಹಿಂಸೆ ಕೊಡುತ್ತಿದ್ದರು. ನಾನು ಮನೆಯವರಿಂದ ಹಣ ಪಡೆದು ಧಾರಾವಾಹಿ ನಿರ್ಮಿಸಿದೆ. ಅದರಿಂದ ಬಂದ ಹಣವನ್ನೂ ಪೋತರಾಜ್ ಕಿತ್ತುಕೊಂಡರು. ಮೊನ್ನೆಯಂತೂ ನನ್ನನ್ನು ಹಿಡಿದುಕೊಂಡು ಕಾರ್‍ಗೆ ಗುದ್ದಿದ್ದಾರೆ. ಮೂಗು, ಬಾಯಿಯಿಂದ ರಕ್ತ ಬಂದಿದೆ ಎಂದು ದೂರು ಕೊಟ್ಟಿದ್ದಾರೆ ಚೈತ್ರಾ ಹಳ್ಳಿಕೇರಿ.

ಘಟನೆ ನಡೆದಿರುವುದು ಮಾರ್ಚ್ 14ರಂದು. ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. 

Londonalli Lambodara Movie Gallery

Rightbanner02_butterfly_inside

Panchatantra Movie Gallery