` ಕಳೆದುಹೋದ ಮುಖ್ಯಮಂತ್ರಿಗಳನ್ನು ಹುಡುಕುತ್ತಾ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
story of missing story in mukhyamantri kaldodnappo
Mukhyamantri Kaldonappo Movie Image

ಮುಖ್ಯಮಂತ್ರಿ ಕಳೆದೋದ್ನಪ್ಪೋ.. ಇದೊಂದು ವಿಭಿನ್ನ ಟೈಟಲ್ ಇರುವ ವಿಶಿಷ್ಟ ಕಥೆ. ಚಿತ್ರದಲ್ಲಿ ಭರತ್ ಭದ್ರಯ್ಯ ನಾಯಕ. ಅಮೂಲ್ಯ ರಾಜ್ ನಾಯಕಿ. ಮಾಸ್ಟರ್ ಹಿರಣ್ಣಯ್ಯನವರ ಪುತ್ರ ಬಾಬು ಹಿರಣ್ಣಯ್ಯನವರೇ ಮುಖ್ಯಮಂತ್ರಿ.

ಇಷ್ಟಕ್ಕೂ ಚಿತ್ರದ ಕಥೆ ಏನು..? ಕಥೆ ಸಿಂಪಲ್ಲು. ಕುತಂತ್ರಿ ರಾಜಕಾರಣಿಗಳು ತಮ್ಮ ಅಧಿಕಾರ, ಅವ್ಯವಹಾರ ರಕ್ಷಿಸಿಕೊಳ್ಳೋಕೆ ಒಬ್ಬ ಹಳ್ಳಿಮುಕ್ಕನನ್ನು ಕರೆತಂದು ಸಿಎಂ ಮಾಡಿಬಿಡ್ತಾರೆ. ಆದರೆ, ಅವನಿಗೆ ಸಿಎಂ ಹುದ್ದೆಯ ಕಷ್ಟಗಳನ್ನು ತಡೆದುಕೊಳ್ಳೋಕೆ ಆಗಲ್ಲ. ಅವನು ಓಡಿ ಹೋಗ್ತಾನೆ. ನಾಪತ್ತೆಯಾಗಿಬಿಡ್ತಾನೆ.

ಮುಂದೇನು..? ಸಿನಿಮಾ ನೋಡಿ.. ಮಜವಾಗಿದೆ. ಇದೇ ಶುಕ್ರವಾರ ರಿಲೀಸ್. ಆರ್.ಶಿವಕುಮಾರ್ ಚಿತ್ರದ ನಿರ್ದೇಶಕ. ಕತೆ, ಚಿತ್ರಕತೆಯೂ ಅವರದ್ದೇ. ಸಿನಿಮಾ ಥಿಯೇಟರ್‍ಗೆ ಹೋಗಿ ಸಿದ್ದರಾಮಯ್ಯರನ್ನ ಹುಡುಕಬೇಡಿ ಮತ್ತೆ.. ಸಿನಿಮಾದಲ್ಲಿ ನೀವ್ ನೋಡೋದು ರೀಲ್ ಸಿಎಮ್ಮು.

Padarasa Movie Gallery

Kumari 21 Movie Gallery