` ಶ್ರಿಯಾ ಸರಣ್ ನಿರಾಕರಿಸಿದ್ದ ಮದುವೆಯೇ ಅಧಿಕೃತ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
shriya saran gets married to her russian boyfriend
Shriya Saran Marriage Image

ಶ್ರಿಯಾ ಸರಣ್. ಕನ್ನಡಿಗರ ಪಾಲಿಗೆ ಚಂದ್ರ ಚಕೋರಿ. ಚಂದ್ರ ಚಿತ್ರದ ಹೀರೋಯಿನ್ ಆಗಿದ್ದ ಶ್ರಿಯಾ, ಪುನೀತ್ ಜೊತೆ ಅರಸು ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇಷ್ಟುಬಿಟ್ಟರೆ ಶ್ರಿಯಾ ಸರಣ್, ತಮಿಳು, ತೆಲುಗು, ಹಿಂದಿಯಲ್ಲಿ ಮಿಂಚಿದ್ದೇ ಹೆಚ್ಚು. ಇತ್ತೀಚೆಗೆ ಶ್ರಿಯಾ ಸರಣ್ ಮದುವೆ ಬಗ್ಗೆ ಸುದ್ದಿ ಹರಿದಾಡಿತ್ತು. 

ಆಗ ಮದುವೆ ಸುದ್ದಿಯನ್ನು ಶ್ರಿಯಾ ಅವರ ತಾಯಿ ನಿರಾಕರಿಸಿದ್ದರು. ಆ ನಿರಾಕರಿಸಿದ್ದ ಸುದ್ದಿಯೇ ಈಗ ಅಧಿಕೃತವಾಗಿದೆ. ರಷ್ಯನ್ ಗೆಳೆಯ ಆ್ಯಂಡ್ರೆ ಕೊಸ್ಟೀವ್ ಅವರನ್ನು ಮದುವೆಯಾಗಿದ್ದಾರೆ ಶ್ರಿಯಾ. ಆ್ಯಂಡ್ರೆ, ವೃತ್ತಿಪರ ಟೆನಿಸ್ ಆಟಗಾರ ಹಾಗೂ ಹೋಟೆಲ್ ಉದ್ಯಮಿ.

ಕಳೆದ ವಾರ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದ ಶ್ರಿಯಾ, ನಂತರ ಸಾಂಪ್ರದಾಯಿಕವಾಗಿ ವಿವಾಹವಾಗಿದ್ದಾರೆ

Londonalli Lambodara Movie Gallery

Rightbanner02_butterfly_inside

Panchatantra Movie Gallery