` ಎನ್‍ಕೌಂಟರ್ ಸ್ಪೆಷಲಿಸ್ಟ್ ಜಗ್ಗೇಶ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
jaggesh to become encounter specialist
Jaggesh Image

ನವರಸ ನಾಯಕ ಜಗ್ಗೇಶ್, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ಕೆಣಕಿದವರಿಗೆ ಕೌಂಟರ್ ಕೊಡ್ತಾ ಎನ್‍ಕೌಂಟರ್ ಮಾಡ್ತಾನೇ ಇರ್ತಾರೆ. ಆದರೆ, ಈಗ ಅವರು ಪಕ್ಕಾ ಎನ್‍ಕೌಂಟರ್ ಸ್ಪೆಷಲಿಸ್ಟ್ ಆಗೋಕೆ ರೆಡಿಯಾಗಿಬಿಟ್ಟಿದ್ದಾರೆ. ಕವಿರಾಜ್ ನಿರ್ದೇಶನದ ಹೊಸ ಚಿತ್ರದಲ್ಲಿ ಜಗ್ಗೇಶ್ ಎನ್‍ಕೌಂಟರ್ ಸ್ಪೆಷಲಿಸ್ಟ್ ಆಗಿ ನಟಿಸುತ್ತಿದ್ದಾರೆ. 

8ಎಂಎಂ ಚಿತ್ರದಲ್ಲಿ ನೆಗೆಟಿವ್ ರೋಲ್‍ನಲ್ಲಿ ಕಾಣಿಸಿಕೊಂಡಿರುವ ಜಗ್ಗೇಶ್, ಇದಾದ ಮೇಲೆ ಒಪ್ಪಿಕೊಂಡಿರುವ ಚಿತ್ರ ಕವಿರಾಜ್ ಅವರದ್ದು. ಮದುವೆಯ ಮಮತೆಯ ಕರೆಯೋಲೆ ನಂತರ ಕವಿರಾಜ್ ನಿರ್ದೇಶಿಸುತ್ತಿರುವ ಎರಡನೇ ಸಿನಿಮಾ ಇದು. ಚಿತ್ರಕ್ಕೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ಕಥೆ ಕೇಳಿ ಜಗ್ಗೇಶ್ ಓಕೆ ಎಂದಿದ್ದಾರೆ. ಶೂಟಿಂಗ್ ಶುರುವಾಗಬೇಕು.

Padarasa Movie Gallery

Kumari 21 Movie Gallery