ಯೋಗಿ ದುನಿಯಾ ಚಿತ್ರದ ಟ್ರೇಲರ್, ಯೋಗಿಯ ಲುಕ್, ನಾಯಕಿ ಹಿತಾರ ಮುಗ್ಧ ಮುಖ.. ಇಡೀ ಟ್ರೇಲರ್‍ನಲ್ಲಿ ಕಾಣಿಸಿಕೊಳ್ಳುವ ರಾತ್ರಿಯ ಬೆಳಕು.. ಎಲ್ಲವನ್ನು ನೋಡಿದವರಿಗೆ ಒಂದು ಕುತೂಹಲವಂತೂ ಬಂದೇ ಬರುತ್ತೆ. ಇದರಲ್ಲಿರೋದು ಮೆಜೆಸ್ಟಿಕ್ ನೈಟ್ ಲೈಫ್ ಸ್ಟೋರಿ.
ಈ ಮೆಜೆಸ್ಟಿಕ್ ಅನ್ನೋದಿದ್ಯಲ್ಲ. ಅದು ಸಾವಿರಾರು ಕಥೆಗಳನ್ನು ತನ್ನ ಗರ್ಭದಲ್ಲಿ ಅಡಗಿಸಿಟ್ಟುಕೊಂಡಿದೆ. ಅದೊಂಥರಾ ವಿಚಿತ್ರ ಜಗತ್ತು. ಕೆಲವು ರಹಸ್ಯಗಳು ಗೊತ್ತಾದರೂ ಅರ್ಥವಾಗುವುದಿಲ್ಲ. ಅರ್ಥವಾದರೂ ನಂಬಬೇಕಾ ಎಂಬ ಅನುಮಾನ ಕಾಡೋಕೆ ಶುರುವಾಗುತ್ತೆ. ಮೆಜೆಸ್ಟಿಕ್ ಅನ್ನೋದೇ ಹಾಗೆ. ಸರಳವಾಗಿ ಅರ್ಥವಾಗುವುದಿಲ್ಲ.
ಅಂತಹ ಮೆಜೆಸ್ಟಿಕ್ ಸುತ್ತಮುತ್ತ ನಡೆಯುವ ಕಥೆಯೇ ಯೋಗಿ ದುನಿಯಾದಲ್ಲಿರೋದು. ಚಿತ್ರದಲ್ಲಿ ಯೋಗಿ, ಟ್ರಾವೆಲ್ ಏಜೆಂಟ್. ಅವರ ಪ್ರೇಯಸಿಯಾಗಿ ಹಿತಾ ಚಂದ್ರಶೇಖರ್ ಇದ್ದಾರೆ. ಅವರಿಬ್ಬರ ಪ್ರೀತಿಯ ನಡುವೆ ಬಿಚ್ಚಿಕೊಳ್ಳೋದು ಬೆಟ್ಟಿಂಗ್ ಸ್ಟೋರಿ.
ಇವುಗಳನ್ನು ಕಥೆಯಲ್ಲಿ ಕೂರಿಸಿರುವುದು ನಿರ್ದೇಶಕ ಹರಿ. ಚಿತ್ರವನ್ನು ಬಹುತೇಕ ರಾತ್ರಿ ವೇಳೆಯಲ್ಲಿಯೇ ಶೂಟ್ ಮಾಡಲಾಗಿದೆ.