` ಅಮ್ಮ ಐ ಲವ್ ಯೂ ಫಸ್ಟ್ ಲುಕ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
amma i love you first look revealed
Amma I Love You First Look

ದ್ವಾರಕೀಶ್ ಚಿತ್ರ ನಿರ್ಮಾಣದ ಅಮ್ಮ ಐ ಲವ್ ಯೂ ಚಿತ್ರದ ಫಸ್ಟ್‍ಲುಕ್, ಈ ಯುಗಾದಿಗೆ ಬಿಡುಗಡೆಯಾಗಿದೆ. ಇದು ದ್ವಾರಕೀಶ್ ಚಿತ್ರ ಸಂಸ್ಥೆಯ 51ನೇ ಹೆಮ್ಮೆಯ  ಕೊಡುಗೆ. 3 ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ಚಿತ್ರೋದ್ಯಮದಲ್ಲಿರುವ ದ್ವಾರಕೀಶ್ ಚಿತ್ರ ಸಂಸ್ಥೆ, ಈಗಾಗಲೇ ಚಿತ್ರ  ನಿರ್ಮಾಣದಲ್ಲಿ ಅರ್ಧಶತಕ ಪೂರೈಸಿದೆ. ಇದು 51ನೇ ಸಿನಿಮಾ.

ಚಿರಂಜೀವಿ ಸರ್ಜಾ ಅಭಿನಯದ ಚಿತ್ರದಲ್ಲಿ ನಾಯಕಿ ನಿಶ್ವಿಕಾ ನಾಯ್ಡು ಹೊಸ ಮುಖ. ಸಿತಾರಾ, ಪ್ರಕಾಶ್ ಬೆಳವಾಡಿ, ರವಿ ಕಾಳೆ, ಚಿಕ್ಕಣ್ಣ, ಬಿರಾದಾರ್ ಮೊದಲಾದ ಕಲಾವಿದರು ನಟಿಸಿರುವ ಚಿತ್ರಕ್ಕೆ ಗುರುಕಿರಣ್ ಸಂಗೀತವಿದೆ.

ಶೇಖರ್ ಚಂದ್ರು ಸಿನಿಮಾಟೋಗ್ರಫಿ ಇರುವ ಸಿನಿಮಾಗೆ, ವಿಶ್ವ ಸಂಕಲನದ ಹೊಣೆ ನಿರ್ವಹಿಸಿದ್ದಾರೆ. ದ್ವಾರಕೀಶ್ ಮತ್ತು ಯೋಗಿ ದ್ವಾರಕೀಶ್ ಚಿತ್ರದ ನಿರ್ಮಾಪಕರು. ಅಮ್ಮ ಐ ಲವ್ ಯೂ ಚಿತ್ರಮಂದಿರಕ್ಕೆ ಬರಲು ಸಿದ್ಧವಾಗುತ್ತಿದೆ.

Mataash Pressmeet Gallery

Mataash Movie Gallery