ಎಲೆಕ್ಷನ್ ಹತ್ತಿರ ಇದೆ... ಸಿಎಂ ಸಿದ್ದರಾಮಯ್ಯ ನೋಡಿದ್ರೆ, ಊರೂರು ಸುತ್ತುತ್ತಿದ್ದಾರೆ. ಟಿವಿ ಆನ್ ಮಾಡಿದ್ರೆ ಸಿಎಂ ಸ್ಪೀಚು. ಅಡ್ವರ್ಟೈಸ್‍ಮೆಂಟು.. ಪೇಪರ್ ಓಪನ್ ಮಾಡಿದ್ರೆ ಸಿಎಂದೇ ಜಾಹೀರಾತು. ಸ್ಟೇಟ್‍ಮೆಂಟು. ಎಲ್ರೀ ಕಳ್ದೋಗವ್ರೆ..? ಇಷ್ಟ್ ವರ್ಷ ಕಳೆದುಹೋಗಿದ್ದದ್ದು ಮತದಾರರು ಅಷ್ಟೇಯಾ. ಸದ್ಯಕ್ಕೆ ಮುಖ್ಯಮಂತ್ರಿಗಳು ಆ ಮತದಾರರನ್ನೇ ಹುಡುಕ್ತಾ ಇರೋದು. ಸ್ಟಾಪ್..ಸ್ಟಾಪ್.. ಅಂತಾ ಸೀರಿಯಸ್ಸಾಗೇನೂ ಹೇಳಬೇಡಿ. ನಾವ್ ಹೇಳ್ತಿರೋದು ರಿಯಲ್ ಸಿಎಂ ಬಗ್ಗೆ ಅಲ್ಲ, ರೀಲ್ ಸಿಎಂ ಬಗ್ಗೆ.
ಎಲ್ಲವೂ ಸಿದ್ಧವಾಗಿ ತೆರೆಗೆ ಬರೋಕೆ ಸಿದ್ಧವಾಗಿರುವ ಚಿತ್ರ ಮುಖ್ಯಮಂತ್ರಿ ಕಳೆದೋದ್ನಪ್ಪೋ.. ಟ್ಯಾಗ್‍ಲೈನು ಕುರುಡು ದೇಶ..ಅನಾಥ ರಾಜ್ಯ.
ತನ್ನ ವಿಭಿನ್ನ ಟೈಟಲ್‍ನಿಂದಲೇ ಗಮನ ಸೆಳೀತಿರೋ ಚಿತ್ರದಲ್ಲಿ ಮಾಸ್ಟರ್ ಹಿರಣ್ಣಯ್ಯನವರ ಪುತ್ರ ಬಾಬು ಹಿರಣ್ಣಯ್ಯ ಮುಖ್ಯಮಂತ್ರಿಯಾಗಿ ನಟಿಸಿದ್ದಾರೆ. ಅಮೂಲ್ಯ ರಾಜ್ ನಾಯಕಿ. ಭರತ್ ಭದ್ರಯ್ಯ ನಾಯಕ. ಕಥೆ, ಚಿತ್ರಕಥೆ, ನಿರ್ದೇಶನ ಆರ್.ಶಿವಕುಮಾರ್ ಭದ್ರಯ್ಯ ಅವರದ್ದು.
ಚಿತ್ರದ ಟೈಟಲ್ಲೇ ಹಿಂಗೆ.. ಕಥೆ ಹೆಂಗೋ..? ಪ್ರಶ್ನೆ ಮೂಡಿರುತ್ತಲ್ವಾ..?ಕಥೆಯಂತೂ ಮಜವಾಗಿದೆ. ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತಲೇ, ಒಂದು ಚಿಂತನೆಯನ್ನು ತಲೆಯೊಳಗೆ ಹಚ್ಚುತ್ತದೆ. ಅದು ರಾಜಕೀಯ ವಿಡಂಬನೆಯೂ ಹೌದು. ವಾಸ್ತವ ಜಗತ್ತಿಗೆ ಹಿಡಿಯುವ ಕನ್ನಡಿಯೂ ಹೌದು. ವೇಯ್ಟ್ ಮಾಡಿ.