` ಯೋಗಿ ದುನಿಯಾ.. ಮಾದನ ಅದೃಷ್ಟ ಬದಲಿಸುತ್ತಾ..? - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
yogi duniya
Yogi Duniya Movie Image

ದುನಿಯಾ. ಕನ್ನಡ ಚಿತ್ರರಂಗದ ದಿಕ್ಕು ಬದಲಿಸಿದ ಚಿತ್ರಗಳಲ್ಲಿ ಅದೂ ಒಂದು. ಸೂರಿ ಎಂಬ ನಿರ್ದೇಶಕನನ್ನೂ, ವಿಜಯ್ ಎಂಬ ನಟನನ್ನೂ ಸ್ಟಾರ್ ಮಾಡಿದ ಸಿನಿಮಾ ಅದು. ಆ ಚಿತ್ರದಲ್ಲೊಂದು ಪುಟ್ಟ ವಿಲನ್ ಪಾತ್ರದಲ್ಲಿ ನಟಿಸಿ ಮಿಂಚಿದ್ದವರು ಯೋಗಿ. ಎಷ್ಟರಮಟ್ಟಿಗೆ ಎಂದರೆ, ಅವರ ಪಾತ್ರದ ಹೆಸರೇ ಅವರ ಬಿರುದೂ ಆಗಿ ಹೋಯ್ತು. ಯೋಗಿ ಎಂದರೆ ಲೂಸ್‍ಮಾದ ಯೋಗಿ ಎಂಬಷ್ಟರ ಮಟ್ಟಿಗೆ ಯೋಗಿ ಫೇಮಸ್ ಆದರು.

ಈಗ ಅದೇ ಟೈಟಲ್‍ನಲ್ಲಿ ಯೋಗಿ ದುನಿಯಾ ಆಗಿ ಬರುತ್ತಿದೆ ಹೊಸ ಸಿನಿಮಾ. ಈ ಚಿತ್ರದಲ್ಲಿ ಯೋಗಿ ಹೀರೋ. ಶೀರ್ಷಿಕೆಯೊಂದನ್ನು ಬಿಟ್ಟರೆ, ಮಿಕ್ಕಂತೆ ಇಡೀ ಚಿತ್ರದಲ್ಲಿ ಹೊಸತನವಿದೆ ಎಂದಿದ್ದಾರೆ ಯೋಗಿ. ಚಿತ್ರದ ಮೇಕಿಂಗ್ ಕಣ್ಮನ ಸೆಳೆಯುವಂತಿದೆ. ಇತಾ ಚಂದ್ರಶೇಖರ್ ನಾಯಕಿಯಾಗಿರುವ ಚಿತ್ರಕ್ಕೆ, ಹರಿ ಎಂಬುವವರ ನಿರ್ದೇಶನವಿದೆ. ಇಡೀ ಚಿತ್ರ ನಡೆಯುವುದು ಕೆಆರ್ ಮಾರುಕಟ್ಟೆಯಲ್ಲಂತೆ.  ಚಿತ್ರಮಂದಿರಕ್ಕೆ ಹೋದರೆ, ದುನಿಯಾ-2 ಅನುಭವ ಕಣ್ತುಂಬಿಕೊಳ್ಳಬಹುದು.