` 3 ಸಿನಿಮಾದಲ್ಲಿ ಅಂಥದ್ದೇನಿರುತ್ತೆ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
dandupalya 3 movie image
3 Movie Image

111.. ಅಂದರೆ 3. ಸಿನಿಮಾ ಟೈಟಲ್‍ನಲ್ಲಿ ನಂಬರ್‍ಗಳನ್ನಷ್ಟೇ ಇಟ್ಟುಕೊಂಡು ಸಿನಿಮಾ ಮಾಡಿರುವುದು ಶ್ರೀನಿವಾಸ ರಾಜು. ದಂಡುಪಾಳ್ಯ ಹಾಗೂ 2 ಚಿತ್ರದ ನಿರ್ದೇಶಕ.

ಯುಎಫ್‍ಓ ಮತ್ತು ಕ್ಯೂಬ್ ಸಂಸ್ಥೆಗಳ ಏಕಸ್ವಾಮ್ಯದ ವಿರುದ್ಧ ದಕ್ಷಿಣ ಭಾರತ ಚಿತ್ರರಂಗ ಸಮರಕ್ಕೆ ನಿಲ್ಲದೇ ಇದ್ದರೆ, ಈ ಚಿತ್ರ ಮೊದಲ ವಾರದಲ್ಲೇ ಬಿಡುಗಡೆಯಾಗಬೇಕಿತ್ತು. ಚಿತ್ರಗಳ ಬಿಡುಗಡೆಯನ್ನೇ ನಿರ್ಬಂಧಿಸಿ ಹೋರಾಡಿದ ಕಾರಣ, ಚಿತ್ರ ಈ ಶುಕ್ರವಾರ ವಾರ ತೆರೆಗೆ ಬರುತ್ತಿದೆ.

ಚಿತ್ರದಲ್ಲಿರುವುದು ದಂಡುಪಾಳ್ಯ ಹಂತಕರ ಕಥೆ. 3ನೇ ಭಾಗದಲ್ಲಿ ಅಂಥದ್ದೇನಿದೆ ಎಂದು ಪ್ರಶ್ನಿಸುವವರಿಗೆ ಶ್ರೀನಿವಾಸರಾಜು ಗುಟ್ಟು ಬಿಟ್ಟುಕೊಡುವುದೇ ಇಲ್ಲ. `2'ನಲ್ಲಿ ಎಲ್ಲ ತಪ್ಪು ಪೊಲೀಸರದ್ದೇ ಎಂಬ ರೀತಿಯ ಕಥೆ ಇತ್ತು. ಹಾಗಾದರೆ 3ರಲ್ಲಿ ಕಥೆ ಹೇಗೆ..? ಅದು ಸಸ್ಪೆನ್ಸ್. ಆ ಸಸ್ಪೆನ್ಸ್‍ಗೆ ಉತ್ತರ ಸಿಗುವುದು ಈ ಶುಕ್ರವಾರ. 

ಚಿತ್ರದಲ್ಲಿ ಪೂಜಾಗಾಂಧಿ, ಶೃತಿ, ರವಿಶಂಕರ್.. ಇವರೆಲ್ಲ ಕಂಟಿನ್ಯೂ ಆಗಿದ್ದಾರೆ. ಚಿತ್ರದ ಪೋಸ್ಟರ್ ಈಗಾಗಲೇ ವಿಚಿತ್ರ ತಲ್ಲಣ ಸೃಷ್ಟಿಸುತ್ತಿದೆ.