ಕೆಜಿಎಫ್, ಚಿತ್ರೀಕರಣ ಹಂತದಲ್ಲಿರುವಾಗಲೇ ಚಿತ್ರದ ಕುರಿತ ಒಂದೊಂದೇ ರೋಚಕ ಸಂಗತಿಗಳು ಕುತೂಹಲ ಹುಟ್ಟಿಸುತ್ತಿವೆ. ಅಂಥದ್ದೇ ಕುತೂಹಲ ಹುಟ್ಟಿಸಿದ್ದುದು ಚಿತ್ರದ ಪೋಸ್ಟರ್‍ನಲ್ಲಿ ಬಳಕೆಯಾಗಿದ್ದ ಬೈಕ್. ಏಕೆಂದರೆ, ವಾಸ್ತವದಲ್ಲಿ ಅಂಥಾದ್ದೊಂದು ಮಾಡೆಲ್‍ನ ಬೈಕ್ ಇಲ್ಲ.
ಹಾಗಾದರೆ, ಈ ಬೈಕ್ ಸಿದ್ಧ ಮಾಡಿದ್ದು ಯಾರು..? ಅದರ ಹಿಂದಿರೋದು ಸಿನಿಮಾದ ಕೊರಿಯೋಗ್ರಾಫರ್ ಭುವನ್ ಗೌಡ & ಅವರ ಟೀಂ. ಪ್ರಶಾಂತ್ ನೀಲ್ ಅವರಿಗೆ ಸಿನಿಮಾದಲ್ಲಿ ಹೀರೋಗೆ ಒಂದು ಡಿಫರೆಂಟಾದ ಬೈಕು ಬೇಕು ಎನಿಸಿತ್ತು. ಅದನ್ನು ಭುವನ್ ಗೌಡ ಅವರಿಗೆ ಹೇಳಿದರು. ಅಂಥಾದ್ದೊಂದು ಬೈಕ್ ಹುಡುಕಿಕೊಂಡು ಹೊರಟ ತಂಡ ರಾಯಲ್ ಎನ್‍ಫೀಲ್ಡ್‍ನ ಟ್ರ್ಯಾಂಪ್ 500 ಸಿಸಿ ಬೈಕ್ ಖರೀದಿಸಿತು. ಅದನ್ನು ವಿದ್ಯಾಪೀಠ ಸರ್ಕಲ್ ಬಳಿ ಇರೋ ಬೇಗ್ ಅವರ ಗ್ಯಾರೇಜ್‍ಗೆ ಕೊಟ್ಟಿತು.
ಅವರು ಕೇವಲ ಎಂಜಿನ್‍ನ್ನಷ್ಟೇ ಉಳಿಸಿಕೊಂಡು, ಮಿಕ್ಕಿದ್ದನ್ನೆಲ್ಲ ವಿಶೇಷವಾಗಿ ರೂಪಿಸಿಬಿಟ್ಟರು. ಜೊತೆಗೆ ನಿಂತವರು ಭುವನ್ ಗೌಡ, ಅವರ ಟೀಂನ ಆಕಾಶ್.
ಈಗ ಕೆಜಿಎಫ್‍ನ ಈ ಬೈಕ್ ಅಪಾರ ಮೆಚ್ಚುಗೆ ಗಳಿಸುತ್ತಿದೆ. ಬೈಕ್‍ಗಳ ಕ್ರೇಜ್ ಹೊಂದಿರುವವರಂತೂ ಈಗಾಗಲೇ ಅದೇ ರೀತಿಯ ಬೈಕ್ ಡಿಸೈನ್ ಮಾಡಿಸುತ್ತಿದ್ದಾರೆ. ಶೂಟಿಂಗ್ ಮುಗಿಯುವ ಮೊದಲೇ ಕೆಜಿಎಫ್ ಕ್ರೇಜ್ ಶುರುವಾಗಿದೆ.