` ನಟಿ ಸಿಂಧೂ ಅರೆಸ್ಟ್ ಆಗ್ತಾರಾ..? - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
sindhu menon in cheating case
Sindhu Menon Image

ಚಿತ್ರನಟಿ ಸಿಂಧು ಮೆನನ್. ಕನ್ನಡದಲ್ಲಿ ನಂದಿ, ಪ್ರೇಮ ಪ್ರೇಮ ಪ್ರೇಮ, ಖುಷಿ, ಧರ್ಮ.. ಮೊದಲಾದ ಚಿತ್ರಗಳಲ್ಲಿ ನಟಿಸಿದ್ದ ನಟಿ. ಕೇರಳದವರಾದರೂ ಹುಟ್ಟಿದ್ದು ಬೆಳೆದಿದ್ದು ಎಲ್ಲ ಬೆಂಗಳೂರಿನಲ್ಲಿ. ಮದುವೆಯಾಗಿ ಈಗ ವಿದೇಶದಲ್ಲಿರುವ ಸಿಂಧೂ ಮೆನನನ್ ಈಗ ಬಂಧನ ಭೀತಿಯಲ್ಲಿದ್ದಾರೆ.

ನಟಿ ಸಿಂಧೂ, ಬೆಂಗಳೂರಿನ ಆರ್​ಎಂಸಿಯಲ್ಲಿರುವ ಬ್ಯಾಂಕ್ ಆಫ್  ಬರೋಡಾದಲ್ಲಿ ಆಡಿ ಕಾರ ಖರೀದಿಸಲು 36 ಲಕ್ಷದ 78 ಸಾವಿರ ರೂಪಾಯಿ ಸಾಲ ಪಡೆದಿದ್ದಾರೆ. ಆದರೆ, ಬ್ಯಾಂಕ್​ಗೆ ನೀಡಿರುವ ದಾಖಲೆಗಳೇ ನಕಲಿ. ಇಷ್ಟೆಲ್ಲ ಆದ ಮೇಲೆ ನಿಗದಿಯಂತೆ ಇಎಂಐ ಕೂಡಾ ಕಟ್ಟಿಲ್ಲ. 6 ತಿಂಗಳ ನಂತರ ಸಾಲ ಪಡೆದವರೊಬ್ಬರೂ ಪತ್ತೆಯಿಲ್ಲ. ಹೀಗಾಗಿ ನಟಿ ಸಿಂಧೂ ಮೆನನ್ ವಿರುದ್ಧ ವಂಚನೆಯ ಕೇಸು ದಾಖಲಾಗಿದೆ.

ಪ್ರಕರಣದಲ್ಲಿ ನಟಿ ಸಿಂಧು ಮೆನನ್ ಆರೋಪಿ ನಂ.. 3.  ಜ್ಯುಬಿಲೆಂಟ್ ಮೋಟಾರ್ಸ್ ವರ್ಕ್ಸ್ ಪ್ರೈ. ಕಂಪನಿ ಹೆಸರಲ್ಲಿ ನಕಲಿ ದಾಖಲೆ ಸಲ್ಲಿಸಿರುವ ಸಿಂಧೂ, ವಾಹನದ ದಾಖಲೆಯನ್ನೂ ನೀಡಿಲ್ಲ. ಪ್ರಕರಣ ಸಂಬಂಧ  ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಲ್ಲಿ ಇಬ್ಬರು ಸಿಂಧೂ ಸಂಬಂಧಿಗಳು. ಸದ್ಯಕ್ಕೆ ವಿದೇಶದಲ್ಲಿರುವ ಸಿಂಧೂ ಮೆನನ್, ಬೆಂಗಳೂರಿಗೆ ಬಂದರೆ ಅರೆಸ್ಟ್ ಆಗಬಹುದು.

#

I Love You Movie Gallery

Rightbanner02_butterfly_inside

Yaana Movie Gallery