Print 
producer sundar gowda

User Rating: 0 / 5

Star inactiveStar inactiveStar inactiveStar inactiveStar inactive
 
sundar gowda weds mla's daughter
Sundar Gowda's secret marriage with MLA's Daughter

ಶಿವಮೂರ್ತಿ ನಾಯಕ್, ಮಾಯಕೊಂಡ ಕ್ಷೇತ್ರದ ಶಾಸಕ. ಸುಂದರ್ ಗೌಡ, ಮಾಸ್ತಿಗುಡಿ ಚಿತ್ರದ ನಿರ್ಮಾಪಕ. ಇವರಿಬ್ಬರೂ ದಿಢೀರನೆ ನಾಪತ್ತೆಯಾಗಿದ್ದಾರೆ. ಸುಂದರ್ ಗೌಡ ಜೊತೆ ತಮ್ಮ ಮಗಳು ಪರಾರಿಯಾಗಿದ್ದಾರೆ ಎಂದು ಶಿವಮೂರ್ತಿ ನಾಯಕ್ ಕುಟುಂಬ ಸದಸ್ಯರು ಯಲಹಂಕ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ.

ನಾಪತ್ತೆಯಾದ ಜೋಡಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಇವರಿಬ್ಬರೂ ಬಹಳ ದಿನಗಳಿಂದ ಪ್ರೀತಿಸುತ್ತಿದ್ದರು. ಆದರೆ, ಇವರಿಬ್ಬರ ಪ್ರೀತಿಗೆ ಶಿವಮೂರ್ತಿ ನಾಯಕ್ ಕುಟುಂಬದವರ ಸಮ್ಮತಿ ಇರಲಿಲ್ಲ. ಹೀಗಾಗಿ ಶಾಸಕರು ತಮ್ಮ ಪುತ್ರಿಗೆ ಬೇರೆ ಮದುವೆ ನಿಶ್ಚಯ ಮಾಡಿದ್ದರು.

ಈಗ ಇಬ್ಬರೂ ನಾಪತ್ತೆಯಾಗಿದ್ದು, ಮದುವೆಯಾಗಿದ್ದಾರೆ ಎಂದು ನಟ ದುನಿಯಾ ವಿಜಯ್ ತಿಳಿಸಿದ್ದಾರೆ. ಇಬ್ಬರೂ ವಯಸ್ಕರಾಗಿದ್ದು, ಅವರಿಬ್ಬರೂ ಓಡಿಹೋಗಿಲ್ಲ ಎಂದು ಹೇಳಿದ್ದಾರೆ ಸುಂದರ್ ಗೌಡ ಆಪ್ತ ದುನಿಯಾ ವಿಜಯ್. ಸದ್ಯದ ಮಾಹಿತಿ ಪ್ರಕಾರ ಇಬ್ಬರೂ ಮೈಸೂರಿನ ರೂಸ್ಟ್ ರೆಸಾರ್ಟ್​ನಲ್ಲಿದ್ದಾರೆ ಎನ್ನಲಾಗಿದೆ.