` ಕನ್ನಡದಲ್ಲಿ ಬರಲಿದೆ ನರೇಂದ್ರ ಮೋದಿ ಸಿನಿಮಾ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
a movie in kannada on narendra modi
Narendra Modi Image

ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರ ರಾಜಕೀಯದ ಕೇಂದ್ರಬಿಂದು. ಒಬ್ಬ ಚಾಯ್‍ವಾಲಾ ಪ್ರಧಾನಿಯ ಹುದ್ದೆಗೆ ಏರುವುದು ಸಾಧಾರಣ ಸಂಗತಿಯಲ್ಲ. ಈಗ ಅವರ ಲೈಫ್‍ಸ್ಟೋರಿಯನ್ನು ಸಿನಿಮಾ ಮಾಡಲು ಹೊರಟಿದ್ದಾರೆ ನಿರ್ದೇಶಕಿ ರೂಪಾ ಅಯ್ಯರ್.

ಮಾಡರ್ನ್ ಆಧ್ಯಾತ್ಮ ಚಿಂತಕಿಯೂ ಆಗಿರುವ ನಿರ್ದೇಶಕಿ ರೂಪಾ ಅಯ್ಯರ್, ಚಿತ್ರದಲ್ಲಿ ಆಧ್ಯಾತ್ಮವನ್ನೂ ಸೇರಿಸಿದ್ದಾರಂತೆ. ಇಡೀ ದೇಶವನ್ನು ಸುತ್ತಿರುವ ಕೆಲವೇ ನಾಯಕರಲ್ಲಿ ಒಬ್ಬರಾಗಿರುವ ಮೋದಿಯವರ ಜೀವನದ ಕಥೆ ನಿರ್ಮಿಸೋಕೆ ನಿರ್ಮಾಪಕರೂ ಸಿಕ್ಕಿದ್ದಾರೆ. ಕೆಲವೇ ದಿನಗಳಲ್ಲಿ ಚಿತ್ರದ ಸಂಪೂರ್ಣ ವಿವರ ನೀಡೋದಾಗಿ ಹೇಳಿಕೊಂಡಿದ್ದಾರೆ ರೂಪಾ ಅಯ್ಯರ್.

ಮೋದಿ ಯುವಜನತೆಗೆ ಪ್ರೇರಣೆಯಾದ ರೀತಿಯೇ ನನಗೆ ಇಷ್ಟವಾಯಿತು. ಹಾಗಾಗಿಯೇ ಸಿನಿಮಾ ಮಾಡಲು ನಿರ್ಧರಿಸಿದೆ ಎಂದು ಹೇಳಿಕೊಂಡಿದ್ದಾರೆ ರೂಪಾ. ಹೆಚ್ಚಿನ ಮಾಹಿತಿಗೆ ಇನ್ನೂ ಕೆಲವು ದಿನ ಕಾಯಬೇಕು.

Related Articles :-

Roopa Iyer To Direct A Film About Narendra Modi

Mataash Pressmeet Gallery

Mataash Movie Gallery