ಟಗರು ಚಿತ್ರ ಬಾಕ್ಸಾಫೀಸ್ನಲ್ಲಿ ದಾಖಲೆ ಸೃಷ್ಟಿಸುತ್ತಿರುವಾಗಲೇ ಟಗರು 2ಗೆ ವೇದಿಕೆ ಸಿದ್ಧಗೊಳ್ಳುತ್ತಿದೆ. ಟಗರು ಚಿತ್ರದ ಶೂಟಿಂಗ್ ಮುಗಿದ ಹೊತ್ತಿನಲ್ಲೇ ಟಗರು 2ಗೆ ಮುಹೂರ್ತವೂ ಆಗಿದೆ. ಅದೇ ಸೂರಿ, ಅದೇ ಶ್ರೀಕಾಂತ್ ಕಾಂಬಿನೇಷನ್ನಲ್ಲಿ ಟಗರು 2ಗೆ ಶಿವಣ್ಣ ಓಕೆ ಎಂದಿರುವುದೂ ನಿಜ.
ಆದರೆ, ಈಗ ಟಗರು 2ನಲ್ಲಿ ಶಿವರಾಜ್ ಕುಮಾರ್ ಜೊತೆ ದರ್ಶನ್ ಅವರನ್ನು ಸೇರಿಸಲು ಸಿದ್ಧತೆ ನಡೆದಿವೆ. ಸ್ಟೋರಿ ಲೈನ್ ರೆಡಿ ಇದೆಯೇ ಹೊರತು, ಉಳಿದಂತೆ ಯಾವುದೂ ಸಿದ್ಧಗೊಂಡಿಲ್ಲ. ದರ್ಶನ್ & ಶಿವರಾಜ್ಕುಮಾರ್ ಒಟ್ಟಿಗೇ ನಟಿಸ್ತಾರೆ ಅನ್ನೋದು ಗಾಂಧಿನಗರದಲ್ಲಿ ಹರಿದಾಡುತ್ತಿರುವ ಗಾಸಿಪ್ ಅಷ್ಟೆ. ನಿರ್ಮಾಪಕ, ನಿರ್ದೇಶಕರು ಈ ಬಗ್ಗೆ ಮಾತನಾಡಿಲ್ಲ.
ಈ ಹಿಂದೆ ದೇವರಮಗ ಚಿತ್ರದಲ್ಲಿ ಶಿವರಾಜ್ಕುಮಾರ್ ಜೊತೆ ದರ್ಶನ್ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಈಗ ದರ್ಶನ್ ಚಾಲೆಂಜಿಂಗ್ ಸ್ಟಾರ್. ಒಟ್ಟಿನಲ್ಲಿ ಗಾಳಿಸುದ್ದಿಗೇ ಗಾಂಧಿನಗರ ಥ್ರಿಲ್ಲಾಗಿ ಹೋಗಿದೆ.