Print 
sudeep cricket tournament kccc,

User Rating: 0 / 5

Star inactiveStar inactiveStar inactiveStar inactiveStar inactive
 
kcc sup is sudeep's dream
Karnataka Cricket Tournament To Start Soon

ಐಪಿಎಲ್, ಸಿಸಿಎಲ್ ಮಾದರಿಯಲ್ಲೇ ಇನ್ನೊಂದು ಕ್ರಿಕೆಟ್ ಟೂರ್ನಿ ಆಯೋಜಿಸಲು ಪ್ಲಾನ್‍ವೊಂದು ರೆಡಿಯಾಗುತ್ತಿದೆ. ಅನುಮಾನವೇ ಇಲ್ಲ. ಇದು ಪಕ್ಕಾ ಕಿಚ್ಚ ಸುದೀಪ್ ಅವರದ್ದೇ ಕನಸು. ಐಪಿಎಲ್ ಮಾದರಿಯಲ್ಲೇ ಶುರುವಾದ ಸಿಸಿಎಲ್‍ನಲ್ಲಿ ಸುದೀಪ್, ಪ್ರತಿ ವರ್ಷ ಆಡುತ್ತಾರೆ. ಅಂಥದ್ದೇ ಒಂದು ಟೂರ್ನಿಯನ್ನು ಕನ್ನಡ ಚಲನಚಿತ್ರರಂಗಕ್ಕೇ ಸೀಮಿತಗೊಳಿಸಿ ಆಡುವುದು ಸುದೀಪ್ ಕನಸು.

ಕೆಸಿಸಿ-ಟಿ10 ಅನ್ನೋ ಹೆಸರನ್ನೂ ಇಡಲಾಗಿದೆ. ಅಂದರೆ, ಕರ್ನಾಟಕ ಚಲನಚಿತ್ರ ಕ್ರಿಕೆಟ್ ಕಪ್ ಎಂದರ್ಥ. ಅಷ್ಟೇ ಅಲ್ಲ, ಇದು 20 ಓವರ್‍ಗಳ ಆಟವಲ್ಲ. 10 ಓವರ್‍ಗಳ ಆಟ. ಇನ್ನು ಟೂರ್ನಿ ಹೇಗಿರುತ್ತೆ ಅಂದರೆ, ಒಟ್ಟು 6 ಟೀಂಗಳಿರುತ್ತವೆ. ಸಿಸಿಎಲ್ ಆಡಿರುವ ತಂಡದಲ್ಲಿರುವ ತಲಾ ಮೂರು ಆಟಗಾರರು, ರಾಜ್ಯ ಕ್ರಿಕೆಟ್ ತಂಡದಲ್ಲಿರುವ ತಲಾ ಇಬ್ಬರು ಆಟಗಾರರು ಇರುತ್ತಾರೆ. ಇವರನ್ನು ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಲಾಗುತ್ತೆ.

ತಂಡದಲ್ಲಿ ಕಲಾವಿದರು, ಬರಹಗಾರರು, ತಂತ್ರಜ್ಞರು, ಮಾಧ್ಯಮದವರೂ ತಂಡದಲ್ಲಿರುತ್ತಾರೆ. ಒಂದೊಂದು ತಂಡಕ್ಕೂ ಒಬ್ಬೊಬ್ಬ ಮಾಲೀಕರಿರುತ್ತಾರೆ. ಕ್ರಿಕೆಟ್ ಲೀಗ್‍ನ ಆಂತರಿಕ ಸಮಿತಿಯ ಮೇಲ್ವಿಚಾರಕರಾಗಿ ನಿರ್ಮಾಪಕ ಜಾಕ್ ಮಂಜು, ಕೆ.ಪಿ.ಶ್ರೀಕಾಂತ್, ನಿರ್ದೇಶಕ ಕೃಷ್ಣ, ನಂದಕಿಶೋರ್, ಇಂದ್ರಜಿತ್ ಲಂಕೇಶ್ ಹಾಗೂ ಪತ್ರಕರ್ತ ಸದಾಶಿವ ಶೆಣೈ ಇರುತ್ತಾರೆ.

ಏಪ್ರಿಲ್ 7ರಂದು ಕ್ರಿಕೆಟ್ ಲೀಗ್‍ಗೆ ಚಾಲನೆ ಸಿಗಲಿದೆ.