ರಶ್ಮಿಕಾ ಮಂದಣ್ಣ ಈ ಕಿರಿಕ್ ಚೆಲುವೆ, ಚಮಕ್ ಚೆಲುವೆ ನಟಿಯಾಗುತ್ತಾಳೆ ಎಂದು ಭೂತವೊಂದು ಮೊದಲೇ ಭವಿಷ್ಯ ನುಡಿದಿತ್ತಂತೆ. ಆಗಿನ್ನೂ ರಶ್ಮಿಕಾ ನಟಿಯಾಗಿರಲಿಲ್ಲ. ಕಿರಿಕ್ ಪಾರ್ಟಿ ಚಿತ್ರದ ಆಫರ್ ಕೂಡಾ ಸಿಕ್ಕಿರಲಿಲ್ಲ. ಚಿತ್ರರಂಗಕ್ಕೆ ಬರುವ ಬಗ್ಗೆ ಯಾವುದೇ ಸ್ಪಷ್ಟತೆಯೂ ಇರಲಿಲ್ಲ. ಆಗಲೇ ಭೂತವೊಂದು ಭವಿಷ್ಯ ಹೇಳಿದ್ದ ವಿಚಾರವನ್ನು ರಶ್ಮಿಕಾ ಅವರ ತಾಯಿ ಸುಮನ್ ಮಂದಣ್ಣ ನೆನಪಿಸಿಕೊಂಡಿದ್ದಾರೆ.
ಮಡಿಕೇರಿ, ಮಂಗಳೂರು ಭಾಗದಲ್ಲಿ ಭೂತಾರಾಧನೆಯೇ ವಿಶೇಷ. ಹಾಗೆ ಒಂದು ಕೋಲಕ್ಕೆ ಹೋಗಿದ್ದಾಗ, ಕೋಲ ಕಟ್ಟಿದ್ದವರ ಬಾಯಲ್ಲಿ ರಶ್ಮಿಕಾ ನಟಿ ಎಂಬ ಮಾತು ಬಂದಿತ್ತಂತೆ. ಕೋಲ ಮುಗಿದ ಮೇಲೆ ಪ್ರಸಾದ ನೀಡುವಾಗ ಭೂತ, ನೀನು ನಟಿಯಲ್ಲವೇ ಎಂದು ಕೇಳಿತ್ತಂತೆ. ಆಗ ಆಶ್ಚರ್ಯವಾಗಿತ್ತು, ತುಂಬಾ ಯೋಚನೆ ಮಾಡಿದ್ದೆ ಎಂದು ನೆನಪಿಸಿಕೊಂಡಿದ್ದಾರೆ ಸುಮನ್ ಮಂದಣ್ಣ.
ಕಳೆದ ತಿಂಗಳಷ್ಟೇ ರಶ್ಮಿಕಾ ಮಂದಣ್ಣ, ರಕ್ಷಿತ್ ಶೆಟ್ಟಿ ಜೊತೆ ಭೂತಾರಾಧನೆಗೆ ಹೋಗಿದ್ದರು. ಅದೊಂದು ಅದ್ಭುತ ಅನುಭವ. ನೋಡೋಕೆ ಚೆಂದವಾಗಿರುತ್ತೆ ಎಂದು ನೆನಪಿಸಿಕೊಳ್ತಾರೆ ರಶ್ಮಿಕಾ.