ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿ. ಶೈಲಜಾ ಸುರೇಶ್ ನಿರ್ಮಾಪಕಿ. ಧನಂಜಯ್ ನೆಗೆಟಿವ್ ರೋಲ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಿರ್ದೇಶಕ ಪಿ. ಕುಮಾರ್ ಚಿತ್ರಕ್ಕಾಗಿಯೇ ಹಳ್ಳಿಯ ಸೆಟ್‍ವೊಂದನ್ನು ಹಾಕಿಸಿದ್ದಾರೆ. ಇವರೆಲ್ಲರ ಹೊರತಾಗಿ ಚಿತ್ರದಲ್ಲಿ ಚಿತ್ರರಂಗದ ತಾರಾಬಳಗವೇ ಕಾಣಿಸಿಕೊಳ್ಳಲಿದೆ.
ಯಜಮಾನ ಚಿತ್ರದ ಒಂದು ಹಾಡಿನಲ್ಲಿ ರೆಬಲ್‍ಸ್ಟಾರ್ ಅಂಬರೀಷ್ ಬರಲಿದ್ದಾರೆ. ಲವ್ಲೀಸ್ಟಾರ್ ಪ್ರೇಮ್, ಪ್ರಜ್ವಲ್ ದೇವರಾಜ್, ಜ್ಯೂ. ಟೈಗರ್ ವಿನೋದ್ ಪ್ರಭಾಕರ್ ಸೇರಿದಂತೆ ಹಲವು ಸ್ನೇಹಿತರು ದರ್ಶನ್ ಚಿತ್ರದಲ್ಲಿ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ.
ಇದುವರೆಗೆ ದರ್ಶನ್ ಹಲವು ನಟರ ಚಿತ್ರಗಳಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದರು. ಈಗ ದರ್ಶನ್ ಚಿತ್ರದಲ್ಲಿ ಕಲಾವಿದರು ಅತಿಥಿಗಳಾಗಿ ಬರುತ್ತಿದ್ದಾರೆ. ಪ್ರೀತಿಯಿಂದ.. ಸ್ನೇಹಕ್ಕಾಗಿ..