` ನಂ.1 ರಾಜಕುಮಾರ, 2 ಭರ್ಜರಿ, 3 ಮೊಟ್ಟೆ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
biffes best commercial movies of the year
Rajakumara, Ondu Motteya Kathe, Bharjari Movie Image

ಬೆಂಗಳೂರಿನಲ್ಲಿಯೇ ನಡೆಯುತ್ತಿರುವ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಕಮರ್ಷಿಯಲ್ ಸಿನಿಮಾಗಳ ಆಯ್ಕೆಯಾಗಿದೆ. ಕಲಾತ್ಮಕ ಚಿತ್ರಗಳ ಜೊತೆ ಜೊತೆಯಲ್ಲೇ ಪ್ರದರ್ಶನವಾಗುವ ಮನರಂಜನಾತ್ಮಕ ಚಿತ್ರಗಳಿಗೂ ಪ್ರಶಸ್ತಿ ನೀಡಲಾಗುತ್ತಿದೆ.

ಚಲನಚಿತ್ರೋತ್ಸವದ ನಂ.1 ಕಮರ್ಷಿಯಲ್ ಚಿತ್ರವಾಗಿ ಹೊರಹೊಮ್ಮಿರುವುದು ರಾಜಕುಮಾರ. ಸಂತೋಷ್ ಆನಂದ್‍ರಾಮ್ ನಿರ್ದೇಶನದ, ಹೊಂಬಾಳೆ ಪ್ರೊಡಕ್ಷನ್ಸ್‍ನ ಪುನೀತ್ ರಾಜ್‍ಕುಮಾರ್ ಚಿತ್ರಕ್ಕೆ ನಂಬರ್ ಒನ್ ಪಟ್ಟ ಸಿಕ್ಕಿದೆ.

2ನೇ ಪ್ರಶಸ್ತಿ ಸಿಕ್ಕಿರುವುದು ಧ್ರುವ ಸರ್ಜಾಗೆ ಹ್ಯಾಟ್ರಿಕ್ ಸಕ್ಸಸ್ ಕೊಟ್ಟ ಭರ್ಜರಿ ಚಿತ್ರಕ್ಕೆ. 3ನೇ ಅತ್ಯುತ್ತಮ ಕಮರ್ಷಿಯಲ್ ಚಿತ್ರವಾಗಿ ಹೊರಹೊಮ್ಮಿರುವುದು ರಾಜ್ ಬಿ ಶೆಟ್ಟಿ ಅಭಿನಯದ ಒಂದು ಮೊಟ್ಟೆಯ ಕಥೆ ಚಿತ್ರಕ್ಕೆ. 

 

The Terrorist Movie Gallery

Rightbanner02_taarakasura_inside

Thayige Thakka Maga Movie Gallery