ಅತಿಲೋಕ ಸುಂದರಿ ಶ್ರೀದೇವಿಯ ಇಹಲೋಕ ಯಾತ್ರೆ ಮುಗಿಸಿದ್ದಾರೆ. ಭಾನುವಾರ ದುಬೈನಲ್ಲಿ ಮೃತಪಟ್ಟಿದ್ದ ಶ್ರೀದೇವಿ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರ, ಮುಂಬೈನಲ್ಲಿ ನೆರವೇರಿತು. ವಿಲೆ ಪಾರ್ವೆ ಸೇವಾ ನಮಾಜ್ ಚಿತಾಗಾರದಲ್ಲಿ ಶ್ರೀದೇವಿ ಅವರನ್ನು ಅಯ್ಯಂಗಾರ್ ಸಂಪ್ರದಾಯಂತೆ ಸಂಸ್ಕಾರ ಮಾಡಲಾಯಿತು.
ತಮಿಳುನಾಡಿನವರಾದ ಶ್ರೀದೇವಿಯರಿಗೆ ಕಾಂಜೀವರಂ ರೇಷ್ಮೆ ಸೀರೆ ತೊಡಿಸಿ, ಮೋಹನ ಮಾಲೆ, ಕುಂಕುಮವಿಟ್ಟು, ಮಲ್ಲಿಗೆ ಹೂ ಮುಡಿಸಿ, ಮಾಂಗಲ್ಯದೊಂದಿಗೇ ಸಂಸ್ಕಾರ ನೆರವೇರಿಸಲಾಯಿತು. ಬದುಕಿದ್ದಾಗ ಹೇಗಿದ್ದರೋ, ಅದೇ ರೀತಿ ಅವರ ಪಾರ್ಥಿವ ಶರೀರಕ್ಕೂ ಅಲಂಕಾರ ಮಾಡಲಾಗಿತ್ತು.
ಪಾರ್ಥಿವ ಶರೀರಕ್ಕೆ ರಸ್ತೆಯ ಇಕ್ಕೆಲಗಳಲ್ಲೂ ಸೇರಿದ್ದ ಜನಸ್ತೋಮ, ನಟಿಯ ಅಂತಿಮ ದರ್ಶನ ಪಡೆಯಿತು. ಬಾಲಿವುಡ್‍ಗೆ ಬಾಲಿವುಡ್ಡೇ ಶ್ರೀದೇವಿಯ ಅಂತಿಮಯಾತ್ರೆಯಲ್ಲಿ ಭಾಗವಹಿಸಿ, ಅಗಲಿದ ಕಲಾವಿದೆಗೆ ಆಶ್ರುತರ್ಪಣ ಸಲ್ಲಿಸಿತು.
ಪದ್ಮಶ್ರೀ ಪುರಸ್ಕøತ ಕಲಾವಿದೆ, ಸರ್ಕಾರಿ ಗೌರವದೊಂದಿಗೆ ಅಂತಿಮ ಸಂಸ್ಕಾರಗಳು ನಡೆದವು. ಪತಿ ಬೋನಿ ಕಪೂರ್, 2ನೇ ಪತ್ನಿಯ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದರು.