ಶ್ರೀದೇವಿ ಹಠಾತ್ ಆಗಿ ದುಬೈನಲ್ಲಿ ಮೃತಪಟ್ಟಾಗ ಮೊದಲು ಹೊರಬಿದ್ದ ಮಾಹಿತಿ, ಅದು ಹೃದಾಯಯಾಘಾತದಿಂದ ಸಂಭವಿಸಿದ ಸಾವು ಎಂದು. ಆನಂತರ ಅದು ಹೃದಯಾಘಾತವಲ್ಲ, ಹೃದಯಸ್ತಂಭನ ಎನ್ನಲಾಯ್ತು. ಶ್ರೀದೇವಿಯ ಫಿಟ್ನೆಸ್, ಯೋಗ, ಆಹಾರ ಪದ್ಧತಿಯನ್ನು ಹತ್ತಿರದಿಂದ ನೋಡಿದ್ದವರು, ಅದನ್ನು ನಂಬಲು ತಯಾರಿರಲಿಲ್ಲ. ಅಭಿಮಾನಿಗಳೂ ನಂಬೋಕೆ ಸಿದ್ಧರಿರಲಿಲ್ಲ. ಈಗ ಹೊರಬರುತ್ತಿರುವ ಮಾಹಿತಿ ನಿಜಕ್ಕೂ ಸ್ಫೋಟಕ ಅಂಶವನ್ನೇ ಹೊರಹಾಕಿದೆ. ಶ್ರೀದೇವಿಗೆ ಹೃದಯಾಘಾತವೂ ಆಗಿರಲಿಲ್ಲ, ಹೃದಯಸ್ತಂಭನವೂ ಆಗಿರಲಿಲ್ಲ.
ಇಂಥಾದ್ದೊಂದು ಸ್ಫೋಟಕ ಮಾಹಿತಿ ಹೊರಹಾಕಿರುವುದು ದುಬೈ ಪೊಲಿಸರ ಪೋಸ್ಟ್ಮಾರ್ಟಂ ರಿಪೋರ್ಟ್. ಪೋಸ್ಟ್ಮಾರ್ಟಂ ರಿಪೋರ್ಟ್ ಪ್ರಕಾರ, ಶ್ರೀದೇವಿ ಬಾತ್ಟಬ್ಗೆ ಬಿದ್ದು ಮೃತಪಟ್ಟಿದ್ದಾರೆ. ಆಕೆಯ ದೇಹದಲ್ಲಿ ಮದ್ಯದ ಅಂಶ ವಿಪರೀತ ಎನ್ನುವಷ್ಟು ಪತ್ತೆಯಾಗಿದೆ. ಈ ಪ್ರಕಾರ, ಶ್ರೀದೇವಿಯ ಸಾವು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಂಭವಿಸಿದೆ.
ಆದರೆ, ಇದು ಆಕಸ್ಮಿಕವೇ..? ಅಥವಾ ಬೇರೇನಾದರೂ ರಹಸ್ಯಗಳಿವೆಯೇ..? ದುಬೈ ಪೊಲೀಸರು ಈಗ ತನಿಖೆ ನಡೆಸುವುದು ಖಚಿತ. ತನಿಖೆಯ ವೇಳೆ ಶ್ರೀದೇವಿಯವರ ಪತಿ ಬೋನಿ ಕಪೂರ್ ಕೂಡಾ ವಿಚಾರಣೆಗೊಳಪಡಬೇಕು. ಹೋಟೆಲ್ ಸಿಬ್ಬಂದಿಯೂ ವಿಚಾರಣೆ ಎದುರಿಸಬೇಕು. ಹಾಗಾದರೆ, ಶ್ರೀದೇವಿ ಮೃತಪಟ್ಟಿದ್ದು ಹೇಗೆ..? ಈ ನಿಗೂಢ ಸಾವಿನ ರಹಸ್ಯವಾದರೂ ಏನು..? ಇನ್ನೂ ಕೆಲವು ದಿನ ಕಾಯದೇ ವಿಧಿಯಿಲ್ಲ.
Related Articles :-