` ಸಿನಿಮಾ ರಿಲೀಸ್ ದಿಢೀರ್ ಮುಂದಕ್ಕೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
cinema releases stopped as a ban against ufo and qube
Dandupalya 3 Movie Image

ದಕ್ಷಿಣ ಭಾರತ ಫಿಲಂ ಚೇಂಬರ್, ಯುಎಫ್‍ಓ ಹಾಗೂ ಕ್ಯೂಬ್ ಸಂಸ್ಥೆಗಳ ವಿರುದ್ಧ ಸಮರ ಸಾರಿರುವುದು ಗೊತ್ತಿದೆಯಷ್ಟೇ. ಮನಸೋ ಇಚ್ಛೆ ಶುಲ್ಕ ವಿಧಿಸುತ್ತಿದ್ದ ಸಂಸ್ಥೆಗಳ ವಿರುದ್ಧ ಕನ್ನಡ, ತೆಲುಗು, ತಮಿಳು ಚಿತ್ರೋದ್ಯಮದ ನಿರ್ಮಾಪಕರು ಸಿಡಿದೆದ್ದುಬಿಟ್ಟಿದ್ದಾರೆ. ಯಾವುದೇ ಸಂಧಾನಕ್ಕೆ ಬಗ್ಗದ, ನಿಲುವಿನಲ್ಲಿ ಸ್ವಲ್ಪವೂ ಬದಲಾವಣೆ ಮಾಡಿಕೊಳ್ಳದ ಎರಡೂ ಸಂಸ್ಥೆಗಳ ವಿರುದ್ಧ ಸಮರವನ್ನೇ ಸಾರಿದ್ದಾರೆ. ಹೀಗಾಗಿ ಮಾರ್ಚ್ 2ರಿಂದ ಈ ಸಂಸ್ಥೆಗಳಿಗೆ ಹೊಸ ಸಿನಿಮಾ ನೀಡುವುದನ್ನು ನಿಲ್ಲಿಸಲಾಗಿದೆ.

ಆದರೆ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕೇರಳದಲ್ಲಿ ಈ ಎರಡು ಸಂಸ್ಥೆಗಳೇ ಏಕಸ್ವಾಮ್ಯ ಸಾಧಿಸಿವೆ. ಈ ಏಕಸ್ವಾಮ್ಯದಿಂದಲೇ ಈ ಎರಡೂ ಸಂಸ್ಥೆಗಳು ಹಠ ಹಿಡಿಯುತ್ತಿರುವುದು. ಹೀಗಾಗಿಯೇ ಈ ವಾರದಿಂದ ಹೊಸ ಸಿನಿಮಾಗಳು ಚಿತ್ರಮಂದಿರಕ್ಕೆ ಬರುತ್ತಿಲ್ಲ.

ಪೂರ್ವ ನಿಗಧಿಯಂತೆ ಮಾರ್ಚ್ ತಿಂಗಳಲ್ಲಿ 3 ಬರಬೇಕಿತ್ತು. ದಂಡುಪಾಳ್ಯ ಹಂತಕರ ಸರಣಿಯ 3ನೇ ಭಾಗ ಕನ್ನಡ ಮತ್ತು ತೆಲುಗು ಎರಡರಲ್ಲೂ ತೆರೆ ಕಾಣಬೇಕಿತ್ತು. ಚಿತ್ರ ಮುಂದಕ್ಕೆ ಹೋಗಿದೆ.

ಬಿಡುಗಡೆಗೆ ಎಲ್ಲವನ್ನೂ ಸಿದ್ಧಮಾಡಿಕೊಂಡಿದ್ದ ನಂಜುಂಡಿ ಕಲ್ಯಾಣ ಕೂಡಾ ಮುಂದೆ ಹೋಗಿದೆ.  ಹೀಗೆ.. ಹಲವು ಸಿನಿಮಾಗಳು ಬಿಡುಗಡೆಯನ್ನು ಮುಂದೆ ಹಾಕಿವೆ. ಇದು ಕೇವಲ ಕನ್ನಡದಲ್ಲಷ್ಟೇ ಅಲ್ಲ, ತಮಿಳು, ತೆಲುಗು ಹಾಗೂ ಮಲಯಾಳಂ ಚಿತ್ರಗಳೂ ರಿಲೀಸ್ ಆಗುತ್ತಿಲ್ಲ.

Related Articles :-

ಮಾರ್ಚ್ 2ರಿಂದ 5 ರಾಜ್ಯಗಳಲ್ಲಿ ಸಿನಿಮಾ ಇರಲ್ಲ..!

No new Films From March 2

ಮಾರ್ಚ್ 1, ಥಿಯೇಟರ್‍ಗಳಲ್ಲಿ ಸಿನಿಮಾ ಇರಲ್ಲ..!