` ದರ್ಶನ್ ಒಡೆಯರ್‍ಗೆ ವಿರೋಧ ಏಕೆ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
darshan's odeyar title  in controversy
Odeyar Title In Controversy

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯಕ್ಕೆ ಯಜಮಾನ ಚಿತ್ರದಲ್ಲಿ ಬ್ಯುಸಿ. ಸಂದೇಶ್ ನಾಗರಾಜ್ ನಿರ್ಮಾಣದ ಒಡೆಯರ್, ದರ್ಶನ್ ಒಪ್ಪಿಕೊಂಡಿರುವ ಮುಂದಿನ ಸಿನಿಮಾ. ಟೈಟಲ್ ಆಗಿದೆಯೇ ಹೊರತು, ಉಳಿದ ಕೆಲಸಗಳು ಶುರುವಾಗಿಲ್ಲ. ಆದರೆ, ಟೈಟಲ್ ಬಿಡುಗಡೆಯಾಗುತ್ತಿದ್ದಂತೆಯೇ ಚಿತ್ರಕ್ಕೆ ವಿರೋಧ ವ್ಯಕ್ತವಾಗಿದೆ.

ಮೈಸೂರಿನ ಕನ್ನಡ ಕ್ರಾಂತಿ ದಳ ಎಂಬ ಸಂಘಟನೆಯ ಸದಸ್ಯರು ಒಡೆಯರ್ ಅನ್ನೋ ಟೈಟಲ್‍ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಒಡೆಯರ್ ಅನ್ನೋದು ಮೈಸೂರು ರಾಜವಂಶದ ಹೆಸರು. ನಾಡು, ನುಡಿಗಾಗಿ ಕೊಡುಗೆ ನೀಡಿದವರು. ಅವರ ಹೆಸರಿನಲ್ಲಿ ಕಮರ್ಷಿಯಲ್ ಚಿತ್ರ ಬೇಡ ಅನ್ನೋದು ಅವರ ತಕರಾರು. ಟೈಟಲ್ ಬದಲಾಯಿಸದೇ ಇದ್ದರೆ, ದರ್ಶನ್ ಮನೆ ಎದುರು ಪ್ರತಿಭಟನೆ ನಡೆಸೋದಾಗಿ ಎಚ್ಚರಿಕೆ ನೀಡಿದ್ದಾರೆ ಕ್ರಾಂತಿದಳದ ಸದಸ್ಯರು. 

ಹಾಗಾದರೆ, ಒಡೆಯರ್ ಟೈಟಲ್ ಬದಲಾಗುತ್ತಾ..?

#

Adi Lakshmi Purana Movie Gallery

Rightbanner02_butterfly_inside

Yaana Movie Gallery