` ಮಾರ್ಚ್ 2ರಿಂದ 5 ರಾಜ್ಯಗಳಲ್ಲಿ ಸಿನಿಮಾ ಇರಲ್ಲ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
no new kannada, telugu, tamil, malayalam movies on march 1st
No New Films From March 2nd

ಮಾರ್ಚ್ 2ನೇ ತಾರೀಕಿನಿಂದ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕೇರಳ ರಾಜ್ಯಗಳಲ್ಲಿ ಸಿನಿಮಾ ಪ್ರದರ್ಶನ ಇರುವುದಿಲ್ಲ. ಯುಎಫ್‍ಒ ಮತ್ತು ಕ್ಯೂಬ್ ಕಂಪೆನಿಗಳ ವಿರುದ್ಧ ಸಮರವನ್ನೇ ಸಾರಿರುವ ದಕ್ಷಿಣ ಭಾರತ ಫಿಲ್ಮ್ ಚೇಂಬರ್, ಈ ಕಂಪೆನಿಗಳಿಗೆ ಸಿನಿಮಾ ನೀಡದೇ ಇರಲು ನಿರ್ಧರಿಸಿದೆ.

ಅಂದಹಾಗೆ ಈ ಕ್ಯೂಬ್ ಮತ್ತು ಯುಎಫ್‍ಒ ಕಂಪೆನಿಗಳು ಸಿನಿಮಾಗಳ ಪ್ರತಿಗಳನ್ನು ಡಿಜಿಟಲ್ ರೂಪದಲ್ಲಿ ಪಡೆದು, ಥಿಯೇಟರುಗಳಲ್ಲಿ ಸ್ಯಾಟಲೈಟುಗಳ ಮುಖಾಂತರ ಪ್ರಸಾರ ಮಾಡುವ ವ್ಯವಸ್ಥೆ ಹೊಂದಿವೆ. ಆದರೆ, ಈ ಸಂಸ್ಥೆಗಳು ಚಿತ್ರ ನಿರ್ಮಾಪಕರಿಂದ ದುಬಾರಿ ಶುಲ್ಕ ವಸೂಲಿ ಮಾಡುತ್ತಿದ್ದು, ಶುಲ್ಕವನ್ನು ಕಡಿಮೆ ಮಾಡಿಕೊಳ್ಳಿ ಎನ್ನುವುದು ಚಿತ್ರ ನಿರ್ಮಾಪಕರ ಬೇಡಿಕೆ. ಆದರೆ 4 ಸುತ್ತಿನ ಸಭೆಗಳ ಬಳಿಕವೂ ಕ್ಯೂಬ್ ಮತ್ತು ಯುಎಫ್‍ಒ ಕಂಪೆನಿಗಳು ಶುಲ್ಕ ಕಡಿತಕ್ಕೆ ಒಪ್ಪಿಲ್ಲ. 

ಹೀಗಾಗಿ, ಮಾರ್ಚ್ 2ರಿಂದ ಈ ಕಂಪೆನಿಗಳಿಗೆ ಕನ್ನಡ, ತೆಲುಗು, ತಮಿಳು, ಮಲಯಾಳಂನ ಯಾವುದೇ ಸಿನಿಮಾಗಳನ್ನು ನೀಡದೇ ಇರಲು ತೀರ್ಮಾನಿಸಲಾಗಿದೆ. ಬೆಂಗಳೂರಿನಲ್ಲಿ ನಡೆದ ದಕ್ಷಿಣ ಭಾರತ ಫಿಲಂ ಚೇಂಬರ್ ಅಧ್ಯಕ್ಷ ಎಲ್.ಸುರೇಶ್, ಫಿಲ್ಮಿ ಫೆಡರೇಷನ್ ಆಪ್ ಇಂಡಿಯಾದ ಉಪಾಧ್ಯಕ್ಷ ರವಿ ಕೊಟ್ಟಾರ್‍ಕರ, ಕರ್ನಾಟಕ ಫಿಲಂ ಚೇಂಬರ್ ಅಧ್ಯಕ್ಷ ಸಾ.ರಾ.ಗೋವಿಂದು ಹಾಗೂ ನಾಲ್ಕೂ ರಾಜ್ಯಗಳ ಫಿಲಂ ಚೇಂಬರ್ ಪ್ರಮುಖರು ಸಭೆಯಲ್ಲಿ ಭಾಗವಹಿಸಿ ಈ ನಿರ್ಧಾರ ಕೈಗೊಂಡಿದ್ದಾರೆ.

Related Articles :-

No new Films From March 2

ಮಾರ್ಚ್ 1, ಥಿಯೇಟರ್‍ಗಳಲ್ಲಿ ಸಿನಿಮಾ ಇರಲ್ಲ..!

Kaalidasa Kannada Mestru Movie Gallery

Kabza Movie Launch Gallery