` ದ.ಭಾರತದ ಮಲ್ಟಿಸ್ಟಾರ್ ಚಿತ್ರದಲ್ಲಿ ಪುನೀತ್..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
gautham menon's muttistarrer movie
Gautham Menon, Puneeth Rajkumar Image

ಪುನೀತ್ ರಾಜ್‍ಕುಮಾರ್ ಮುಂದಿನ ಸಿನಿಮಾ ಯಾವುದು..? ಲಿಸ್ಟ್ ನೋಡಿದರೆ ಉದ್ದವಾಗಿದೆ. ರಾಕ್‍ಲೈನ್ ವೆಂಕಟೇಶ್ ಬ್ಯಾನರ್‍ಗೆ ಓಕೆ ಎಂದಿರುವ ಪುನೀತ್‍ಗಾಗಿ ಇನ್ನೂ ಕೆಲವು ನಿರ್ದೇಶಕರು ಕಾಯುತ್ತಿದ್ದಾರೆ. ಪವನ್ ಒಡೆಯರ್, ಶಶಾಂಕ್ ಹಾಗೂ ಸಂತೋಷ್ ಆನಂದ್‍ರಾಮ್ ಕಥೆ ರೆಡಿಯಾಗಿಟ್ಟುಕೊಂಡು ಕ್ಯೂನಲ್ಲಿದ್ದಾರೆ. ಹೀಗಿರುವಾಗಲೇ ಕಾಲಿವುಡ್‍ನಲ್ಲಿ ಮಲ್ಟಿಸ್ಟಾರ್ ಚಿತ್ರದಲ್ಲಿ ಪುನೀತ್ ನಟಿಸಲಿದ್ದಾರೆ ಎಂಬ ಸುದ್ದಿ ಬಂದಿದೆ. ಈ ಸುದ್ದಿ ಕೊಟ್ಟಿರೋದು ಸ್ಟಾರ್ ಡೈರೆಕ್ಟರ್ ಗೌತಮ್ ಮೆನನ್.

ಮಿನ್ನಲೆ, ಕಾಕಕಾಕ್ಕ, ರೆಹನಾ ಹೈ ತೇರಿ ದಿಲ್ ಮೆ, ವಾರನಂ ಆಯಿರಂ, ಎಟೋ ವೆಲ್ಲಿಪೋಯಿಂದಿ ಮನಸು, ಯೇ ಮಾಯೆ ಚೇಸ್ಯಾವೆ, ಎಕ್ ದಿವಾನಾ ಥಾ.. ಹೀಗೆ ಗೌತಮ್ ನಿರ್ದೇಶನದ ಹಿಟ್ ಚಿತ್ರಗಳ ಸಂಖ್ಯೆಯೂ ದೊಡ್ಡದು.

ನಿರ್ದೇಶಕನಾಗಿಯಷ್ಟೇ ಅಲ್ಲ, ನಿರ್ಮಾಪಕನಾಗಿಯೂ ಮಿಸ್ಸಾರಾ ಕನವು, ವೆಪ್ಪಂ, ಒರು ನಾಲ್ ಇರುವಿಲ್, ಪವರ್‍ಪಾಂಡಿಯಂತ.. ವಿಭಿನ್ನ ಸಿನಿಮಾಗಳನ್ನೇ ಕೊಟ್ಟಿರುವ ಖ್ಯಾತಿ ಇವರದ್ದು. 

ಇಂತಹ ಗೌತಮ್ ಈಗ ಮಲ್ಟಿಸ್ಟಾರ್ ಚಿತ್ರಕ್ಕೆ ಮುಂದಾಗಿದ್ದಾರೆ. ಏಕಕಾಲದಲ್ಲಿ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಸಿನಿಮಾ ಮಾಡಲು ಹೊರಟಿದ್ದಾರೆ. ಆ ಚಿತ್ರದಲ್ಲಿ ಕನ್ನಡದಿಂದ ಪುನೀತ್ ರಾಜ್‍ಕುಮಾರ್, ಬಾಲಿವುಡ್ ಹಾಗೂ ಕಾಲಿವುಡ್‍ಗೆ ಮಾಧವನ್, ಮಲಯಾಳಂನಿಂದ ಟುವಿನೋ ಥಾಮಸ್.. ಹೀಗೆ ಕಲಾವಿದರ ಆಯ್ಕೆಯಾಗಿದೆ. ಕಾರ್ತಿಕ್, ಸಿಂಬು ಕೂಡಾ ಚಿತ್ರದಲ್ಲಿರುತ್ತಾರೆ.

ಸದ್ಯಕ್ಕೆ ಈ ಮಾಹಿತಿ ಹೇಳಿರುವುದ ಗೌತಮ್ ಮೆನನ್. ಪುನೀತ್ ರಾಜ್‍ಕುಮಾರ್ ಇನ್ನೂ ಏನೂ ಮಾತನಾಡಿಲ್ಲ. 

I Love You Movie Gallery

Rightbanner02_butterfly_inside

Paddehuli Movie Gallery