` `ಹೇಯ್.. ಅವರನ್ನ ಮುಟ್ಟಬೇಡಿ, ಅವರು ರಾಜ್‍ಕುಮಾರ್ ಫ್ಯಾಮಿಲಿ' - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ub city incident
Haris Son, Guru Rajkumar Image

ಕಾಂಗ್ರೆಸ್ ಶಾಸಕ ಹ್ಯಾರಿಸ್‍ರ ಗೂಂಡಾ ಮಗ ಮಹಮ್ಮದ್ ನಲಪ್ಪಾಡ್‍ನ ಅಟ್ಟಹಾಸ ಇಡೀ ಕರ್ನಾಟಕವನ್ನು ಬೆಚ್ಚಿಬೀಳಿಸಿದೆ. ಮಹಮ್ಮದ್ ನಲಪ್ಪಾಡ್ ಗ್ಯಾಂಗ್‍ನ ಗೂಂಡಾಗಳು ವಿದ್ವತ್‍ಗೆ ಹೊಡೆದಿರುವ ಪರಿ ದೆಹಲಿಯ ನಿರ್ಭಯಾ ಅತ್ಯಾಚಾರ ಪ್ರಕರಣದ ಭೀಕರತೆಯನ್ನು ನೆನಪಿಸುತ್ತಿದೆ. ಗಲಾಟೆ ಶುರುವಾದಾಗ, ಎರಡು ಬಾರಿ ಸ್ಸಾರಿ ಕೇಳಿದ್ದರೂ, ಮಹಮ್ಮದ್ ನಲಪ್ಪಾಡ್‍ನ ಬೂಟಿಗೆ ಮುತ್ತಿಕ್ಕಿ ಕ್ಷಮೆ ಕೇಳಲಿಲ್ಲ ಎಂಬುದೇ ಅವರು ಇಷ್ಟೆಲ್ಲ ಆರ್ಭಟಿಸಲು ಕಾರಣ. ಆದರೆ, ಇಡೀ ಘಟನೆಯಲ್ಲಿ ವಿದ್ವತ್ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ. ನಲಪ್ಪಾಡ್‍ನ ಗ್ಯಾಂಗ್‍ನ ಒಬ್ಬ ಗೂಂಡಾ, ಗಿರಿ ರಾಜ್‍ಕುಮಾರ್ ಅವರನ್ನು ಡಾ.ರಾಜ್ ಫ್ಯಾಮಿಲಿ ಎಂದು ಗುರುತು ಹಿಡಿಯದೇ ಹೋಗಿದ್ದರೆ, ಇಂದು ಗುರು ರಾಜ್‍ಕುಮಾರ್ ಕೂಡಾ ವಿದ್ವತ್ ಸ್ಥಿತಿಯಲ್ಲೇ ಇರುತ್ತಿದ್ದರೇನೋ. 

ಆಸ್ಪತ್ರೆಯಲ್ಲಿ ನಾನು ಪರಿಪರಿಯಾಗಿ ಬೇಡಿಕೊಂಡರೂ ಸುಮ್ಮನಾಗದೆ, ಅವರು ಗಲಾಟೆ ಮಾಡುತ್ತಿದ್ದರು. ನನ್ನ ಮೇಲೂ ಹಲ್ಲೆ ನಡೆಸಲು ಮುಂದಾದರು. ಆದರೆ, ಅಷ್ಟರಲ್ಲಿ ಅವರ ಗುಂಪಿನಲ್ಲಿದ್ದವರೇ ಯಾರೋ ಒಬ್ಬರು, ಏಯ್ ಅವರನ್ನು ಮುಟ್ಟಬೇಡ, ಅವರು ರಾಜ್‍ಕುಮಾರ್ ಫ್ಯಾಮಿಲಿ ಎಂದು ಕೂಗಿಕೊಂಡರು. ಅದಾದ ನಂತರವೇ ಅವರೆಲ್ಲ ತಣ್ಣಗಾಗಿದ್ದು ಮತ್ತು ಜಾಗ ಖಾಲಿ ಮಾಡಿದ್ದು.

ತನ್ನ ಮೇಲೆ ಹಲ್ಲೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದ ಗುರು ರಾಜ್‍ಕುಮಾರ್, ವಿದ್ವತ್‍ನ ಗೆಳೆಯ. 3ನೇ ಕ್ಲಾಸ್‍ನಿಂದ ಒಟ್ಟಿಗೇ ಓದಿದವರು. ಹೀಗಾಗಿ ಆಪ್ತಸ್ನೇಹಿತರೂ ಹೌದು. ಎರಡೂ ಮನೆಯವರು ಒಬ್ಬರ ಮನೆಗೊಬ್ಬರು ಬಂದುಹೋಗುವಷ್ಟು ಮಟ್ಟಿಗೆ ಸ್ನೇಹವಿತ್ತು. ವಿದ್ವತ್ ತಂದೆ  ಲೋಕನಾಥ್, ಡಾ.ರಾಜ್ ಅವರ ಇಡೀ ಕುಟುಂಬಕ್ಕೆ ಪರಿಚಿತರು. 

ವಿದ್ವತ್ ತಂದೆ ಲೋಕನಾಥ್ ಅವರು ಉದ್ಯಮಿ. ಬಹುತೇಕ ಎಲ್ಲ ರಾಜಕಾರಣಿಗಳ ಪರಿಚಯವೂ ಇದೆ. ಆದರೆ, ವಿದ್ವತ್‍ಗೆ ನಲಪ್ಪಾಡ್ ಯಾರೆಂಬುದೇ ಗೊತ್ತಿಲ್ಲ. ಇಬ್ಬರ ಮಧ್ಯೆ ಬಿಟ್ ಕಾಯಿನ್ ವ್ಯವಹಾರ ಇತ್ತು ಎಂಬುದೇ ಸುಳ್ಳು. ನನಗೂ ನಲಪ್ಪಾಡ್ ಯಾರು ಎಂಬುದು ನನಗೂ ಗೊತ್ತಿರಲಿಲ್ಲ. ಆಸ್ಪತ್ರೆ ಬಳಿ ಗಲಾಟೆ ತಣ್ಣಗಾದ ಮೇಲೇ ಅವನು ಕಾಂಗ್ರೆಸ್ ಶಾಸಕ ಹ್ಯಾರಿಸ್ ಮಗ ಎಂದು ಗೊತ್ತಾಗಿದ್ದು. ವಿದ್ವತ್‍ಗೆ ಅದನ್ನು ಹೇಳಿದವನೂ ನಾನೇ ಎಂದು ತಿಳಿಸಿದ್ದಾರೆ ಗುರು ರಾಜ್‍ಕುಮಾರ್.

ನಾನು ಎಷ್ಟು ಬೇಡಿಕೊಂಡರೂ, ಆತನ ಕ್ರೌರ್ಯ ತಣ್ಣಗಾಗಲಿಲ್ಲ. ನಲಪ್ಪಾಡ್ ಜೊತೆ ಸುಮಾರು 15 ಹುಡುಗರು ಆಸ್ಪತ್ರೆಗೆ ಬಂದಿದ್ದರು. ನನಗೆ ವಿದ್ವತ್ ಜೊತೆಯಲ್ಲಿದ್ದ ಗೆಳೆಯನೊಬ್ಬ ಫೋನ್ ಮಾಡಿ ವಿಷಯ ತಿಳಿಸಿದ. ತಕ್ಷಣ ನಾನು ಹೊರಟು ಆಸ್ಪತ್ರೆಗೆ ಬಂದೆ ಎಂದು ಹೇಳಿದ್ದಾರೆ ಗುರು ರಾಜ್‍ಕುಮಾರ್.

ಬಹುಶಃ, ಆ ದಿನ, ನಲಪ್ಪಾಡ್ ಗ್ಯಾಂಗ್ ಸದಸ್ಯರಲ್ಲಿ ಯಾರಿಗೂ ಡಾ.ರಾಜ್ ಕುಮಾರ್ ಫ್ಯಾಮಿಲಿಯ ಪರಿಚಯವೂ ಇಲ್ಲದೇ ಹೋಗಿದ್ದರೆ, ಏನಾಗುತ್ತಿತ್ತೋ ಏನೋ..? ಸದ್ಯಕ್ಕೆ ವಿದ್ವತ್‍ನನ್ನು ಆಸ್ಪತ್ರೆಯಲ್ಲಿ ಅವರ ಕುಟುಂಬದ ಜೊತೆ ಗುರು ರಾಜ್‍ಕುಮಾರ್ ಆರೈಕೆ ಮಾಡುತ್ತಿದ್ದಾರೆ. ಗೆಳೆಯನಿಗೆ ನ್ಯಾಯ ಬೇಕು ಎಂದು ಜಸ್ಟಿಸ್ ಫಾರ್ ವಿದ್ವತ್ ಎಂಬ ಅಭಿಯಾನವನ್ನೂ ನಡೆಸಿದ್ದಾರೆ.

Padarasa Movie Gallery

Rightbanner02_uddishya_inside

Kumari 21 Movie Gallery