ಕೋಟಿಗೊಬ್ಬ ಎಂದರೆ, ವಿಷ್ಣುವರ್ಧನ್, ಕೋಟಿಗೊಬ್ಬ 2 ಎಂದರೆ ಸುದೀಪ್ ನೆನಪಾಗ್ತಾರೆ. ಕೋಟಿಗೊಬ್ಬ 3 ಬರುತ್ತಿರುವುದು ಹೊಸ ಸುದ್ದಿಯೇನೂ ಅಲ್ಲ. ಒನ್ಸ್ ಎಗೇಯ್ನ್ ಆ ಚಿತ್ರಕ್ಕೆ ಸುದೀಪ್ ಅವರೇ ನಾಯಕ. ಸೂರಪ್ಪ ಬಾಬು ನಿರ್ಮಾಪಕ. ಅಂದಹಾಗೆ ಕೋಟಿಗೊಬ್ಬ3ರ ಕಥೆಗಾರ ಸ್ವತಃ ಸುದೀಪ್.
ಕೋಟಿಗೊಬ್ಬ 2ನ ಕ್ಲೈಮಾಕ್ಸ್‍ನಲ್ಲಿ ರವಿಶಂಕರ್ ಜೈಲಿಗೆ ಹೋಗ್ತಾರೆ. ಅವರು ಜೈಲಿಂದ ಹೊರಬರುವಲ್ಲಿಂದ ಕೋಟಿಗೊಬ್ಬ3ರ ಕಥೆ ಶುರುವಾಗುತ್ತೆ. ಸುದೀಪ್ ಹೇಳಿದ ಕಥೆಯ ಎಳೆಯನ್ನು ತುಂಬಾ ಸಮಯ ತೆಗೆದುಕೊಂಡು ಚಿತ್ರಕಥೆ ಮಾಡಲಾಗಿದೆ. ನಿರ್ದೇಶಕ ಶಿವಕಾರ್ತಿಕ್ ಒಳ್ಳೆಯ ಚಿತ್ರಕಥೆ ಹೆಣೆದಿದ್ದಾರೆ ಎಂದು ತಿಳಿಸಿದ್ದಾರೆ ಸೂರಪ್ಪ ಬಾಬು. ಚಿತ್ರದ ಶೂಟಿಂಗ್ ಮಾರ್ಚ್ 2ರಿಂದ ಶುರುವಾಗಲಿದೆ.