` ಟಗರು ಟೈಟಲ್ ಕಾರ್ಡ್‍ನ್ನೂ ಮಿಸ್ ಮಾಡ್ಕೋಬಾರದಂತೆ..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
dont miss the title card of tagaru
Shivarajkumar, Manvitha Harish Image

ಟಗರು ಚಿತ್ರದ ಟೈಟಲ್ ಕಾರ್ಡ್ ಮಿಸ್ ಮಾಡಿಕೊಂಡ್ರೂ, ನಿಮಗೆ ಕಥೆ ಅರ್ಥ ಆಗಲ್ಲ. ಲಿಂಕ್ ಮಿಸ್ ಆಗುತ್ತೆ. ಇಡೀ ಚಿತ್ರ ನಿಮ್ಮನ್ನು ರೆಸ್ಟ್‍ಲೆಸ್ ಆಗಿ ನೋಡುವಂತೆ ಮಾಡುತ್ತೆ. ನೀವು ಎನು ನಿರೀಕ್ಷೆ ಮಾಡಿರ್ತೀರೊ, ಅದಕ್ಕೆ ಉಲ್ಟಾನೇ ನಡೆಯೋದು. ಇದು ಸೂರಿ ತಮ್ಮ ನಿರ್ದೇಶನದ ಟಗರು ಚಿತ್ರದ ಬಗ್ಗೆ ನೀಡಿರುವ ಹೇಳಿಕೆ.

ಇಡೀ ಸಿನಿಮಾ ಮಾಮೂಲಿ ಸ್ಟೈಲ್‍ನಿಂದ ಆಚೆಗೇ ಇದೆ. ಟಗರು ಮೈಯ್ಯೆಲ್ಲ ಪೊಗರು ಅನ್ನೋ ಟೈಟಲ್‍ನಲ್ಲೇ ಫೋರ್ಸ್ ಇದೆ ಎಂದಿದ್ದಾರೆ ಸೂರಿ. ಇದೇ ವೇಳೆ ದೊಡ್ಮನೆ ಹುಡುಗ ಚಿತ್ರವನ್ನೂ ನೆನಪಿಸಿಕೊಂಡಿದ್ದಾರೆ ಸೂರಿ. ದೊಡ್ಮನೆ ಹುಡುಗ ಚಿತ್ರದಲ್ಲಿ ಒಂದೊಳ್ಳೆಯ ಕಥೆ ಇತ್ತು. ಆದರೆ, ಎಲ್ಲೋ ಒಂದು ಕಡೆ ಅದು ನನ್ನ ಕೈಮೀರಿ ಹೋಯಿತು. ಬಹುಶಃ, ತೆಲುಗಿನ ಕಮರ್ಷಿಯಲ್ ನಿರ್ದೇಶಕರು ಆ ಚಿತ್ರಕ್ಕೆ ನ್ಯಾಯ ಒದಗಿಸುತ್ತಿದ್ದರೇನೋ.. ಸಿನಿಮಾ ಗೆದ್ದಿತು ಎನ್ನುವುದು ನಿಜವಾದರೂ, ಅದು ತೃಪ್ತಿ ಕೊಡಲಿಲ್ಲ. ಆದರೆ, ಟಗರು ಚಿತ್ರದಲ್ಲಿ ಅವುಗಳಿಗೆಲ್ಲ ಉತ್ತರ ಸಿಕ್ಕಿದೆ. ಟಗರು ಸಿನಿಮಾ ನೋಡೋಕೆ ಥಿಯೇಟರಿಗೆ ಬರುವ ಪ್ರೇಕ್ಷಕ ಕಟ್ಟಕಡೆಯ ಕ್ಷಣದವರೆಗೂ ಒಂದು ಟೆನ್ಷನ್‍ನಲ್ಲಿಯೇ ಇರುತ್ತಾನೆ.  ಚಿತ್ರ ಅಷ್ಟು ಥ್ರಿಲ್ಲಿಂಗ್ ಆಗಿದೆ ಎಂದಿದ್ದಾರೆ.

 

#

Edakallu GuddadaMele Movie Gallery

Rightbanner02_backasura_inside

Rajaratha Movie Gallery