` ರಂಗ್‍ಬಿರಂಗಿ.. ಸಾಮಾಜಿಕ ಜವಾಬ್ದಾರಿಯ ಸ್ಪೆಷಲ್ ಶೋ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
rangbirangi special show arranged for social cause
Rangbirangi Movie Image

ಇದೇ ವಾರ ತೆರೆಗೆ ಬರುತ್ತಿರುವ ರಂಗ್‍ಬಿರಂಗಿ, ಹೊಸಬರ ವಿಭಿನ್ನ ಪ್ರಯತ್ನ. ಇದರ ಜೊತೆಯಲ್ಲೇ ಅದು ಎಲ್ಲರೂ ಮೆಚ್ಚುವಂತಹ ಕೆಲಸಕ್ಕೂ ಕೈ ಹಾಕಿದೆ. ಸಿನಿಮಾ ತೆರೆಗೆ ಬರುವುದು ಫೆಬ್ರವರಿ 23ರಂದು. ಆ ದಿನ ಮತ್ತು ಅದರ ಮರುದಿನ ಅಂದರೆ, ಫೆಬ್ರವರಿ 24ರಂದು ರಂಗ್‍ಬಿರಂಗಿ ಚಿತ್ರದ ಸ್ಪೆಷಲ್ ಶೋ ಆಯೋಜಿಸಲಾಗಿದೆ.

ಆ ಎರಡು ವಿಶೇಷ ಶೋಗಳಿಂದ ಬಂದ ಹಣ, ನಿರ್ಮಾಪಕರ ಜೇಬಿಗೆ ಹೋಗಲ್ಲ. ಬದಲಿಗೆ, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರ ಚಿಕಿತ್ಸೆಗೆ ಹೋಗಲಿದೆ. ರೋಟಿರಿ ಬೆಂಗಳೂರು ಮೆಟ್ರೋದವರು ಈ ಶೋಗೆ ಕೈಜೋಡಿಸಿದ್ದು, ಅವರ ಮೂಲಕವೇ ಬಂದ ಹಣ ರೋಗಿಗಳನ್ನೂ ತಲುಪಲಿದೆ. ಡೋನರ್ ಪಾಸ್ ಮೂಲಕ, ಸಿನಿಮಾದ ಸ್ಪೆಷಲ್ ಶೋಗೆ ಹೋಗಬಹುದು.

ತನ್ವಿರಾವ್ ನಾಯಕಿಯಾಗಿರುವ ಚಿತ್ರದಲ್ಲಿ ಶ್ರೀಜಿತ್, ಪಂಚಾಕ್ಷರಿ, ಚರಣ್‍ರಾಜ್, ಶ್ರೇಯಸ್ ಪ್ರಮುಖ ಪಾತ್ರದಲ್ಲಿದ್ದಾರೆ. ರಾಮನಗರ ಶಾಂತಕುಮಾರ್ ನಿರ್ಮಾಣದ ಚಿತ್ರ, ತನ್ನ ಹಾಡುಗಳಿಂದ ಗಮನ ಸೆಳೆಯುತ್ತಿದೆ.

Padarasa Movie Gallery

Kumari 21 Movie Gallery