` ರಂಗ್‍ಬಿರಂಗಿ ಹೀರೋಗೆ ದರ್ಶನ್ ಸ್ಫೂರ್ತಿ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
darshan is an inspiration to sreejith
Sreejith, Darshan Image

ರಂಗ್‍ಬಿರಂಗಿ, ಇದೇ ವಾರ ತೆರೆಗೆ ಬರುತ್ತಿರುವ ಚಿತ್ರ. ಈ ಚಿತ್ರದ ಹೀರೋ ಶ್ರೀಜಿತ್.  ಈ ಶ್ರೀಜಿತ್ ಹೀರೋ ಆಗೋಕೆ ಸ್ಫೂರ್ತಿ ದರ್ಶನ್. ಮೊದಲಿನಿಂದಲೂ ದರ್ಶನ್ ಸಿನಿಮಾಗಳನ್ನು ನೋಡಿಕೊಂಡೇ ಬೆಳೆದೆ. ಮೆಜೆಸ್ಟಿಕ್ ಚಿತ್ರ ನನ್ನಲ್ಲಿ ಹಲವು ಕನಸುಗಳನ್ನು ಹುಟ್ಟುಹಾಕಿತು. ದರ್ಶನ್ ಬಿಟ್ಟರೆ, ಶಿವಣ್ಣ ನನಗೆ ತುಂಬಾ ಇಷ್ಟ ಎಂದು ಹೇಳಿಕೊಳ್ತಾರೆ ಶ್ರೀಜಿತ್.

ಶ್ರೀಜಿತ್ ಖುಷಿಗಳ ಪಟ್ಟಿ ದೊಡ್ಡದಿದೆ. ಅವರು ಚಿಕ್ಕಮಗಳೂರಿನ ಮೂಡಿಗೆರೆಯವರು. ಅವರು ಬಣ್ಣದ ಜಗತ್ತಿಗೆ ಎಂಟ್ರಿ ಕೊಟ್ಟಿದ್ದು ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ `ತುಕ್ರನ ಕನಸು' ನಾಟಕದ ಮೂಲಕ. ಅಲ್ಲಿಂದ ಶುರುವಾದ ಬಣ್ಣದ ಲೋಕದ ಪಯಣ, ರಂಗಭೂಮಿ, ಕಿರುತೆರೆ.. ಮತ್ತು ಈಗ ಬೆಳ್ಳಿತೆರೆಯಲ್ಲಿ ಅವಕಾಶ ಸಿಗುವ ಹಂತಕ್ಕೆ ಬಂದು ನಿಂತಿದೆ.

ಡಿ.ಶಾಂತಕುಮಾರ್ ನಿರ್ಮಾಣದ ಚಿತ್ರಕ್ಕೆ, ಮಲ್ಲಿಕಾರ್ಜುನ ಮುತ್ತಗೇರಿ ನಿರ್ದೇಶಕ. ಅಡಿಷನ್‍ನಲ್ಲಿ ಭಾಗವಹಿಸಿ ನಾಯಕನ ಪಾತ್ರಕ್ಕೆ ಸೆಲೆಕ್ಟ್ ಆದ ಶ್ರೀಜಿತ್, ಈಗ ಮೊದಲ ಚಿತ್ರವನ್ನು ಎದುರು ನೋಡುತ್ತಿದ್ದಾರೆ.

#

Edakallu GuddadaMele Movie Gallery

Rightbanner02_backasura_inside

Dandupalya 3 Movie Gallery