` ಡಾ.ರಾಜ್ ಮೊಮ್ಮಗನಿಗೂ ಎಂಎಲ್‍ಎ ಪುತ್ರ ಧಮ್ಕಿ ಹಾಕಿದನಾ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
harris son and guru rajkumar
Mohommad Haris Nalpad, Guru Rajkumar Image

ಶಾಸಕ ಹ್ಯಾರಿಸ್ ಪುತ್ರ ಮಹಮ್ಮದ್ ನಲಪ್ಪಾಡ್, ವಿದ್ವತ್ ಎಂಬ ಯುವಕನ ಮೇಲೆ ರಕ್ತ ಬರುವಂತೆ, ಮೈಯ್ಯೆಲ್ಲ ಬಾತುಕೊಳ್ಳುವಂತೆ ಹೊಡೆದಿರುವುದು ಈಗ ರಾಜ್ಯಾದ್ಯಂತ ಸುದ್ದಿಯಾಗಿದೆ. ಶಾಸಕನ ಪುತ್ರನನ್ನು ಬಂಧಿಸದೆ ಬಿಟ್ಟಿರುವ ಪೊಲೀಸರು, ಆತನ ಗೆಳೆಯರನ್ನಷ್ಟೇ ಬಂಧಿಸಿದ್ದಾರೆ. ಶಾಸಕರ ಪುತ್ರ, ಆರೋಪಿ ಎಲ್ಲಿದ್ದಾನೆ ಎನ್ನುವುದು ಪೊಲೀಸರಿಗೆ ಗೊತ್ತಾಗಿಲ್ಲ. ಹುಡುಕಲು ಸಾಧ್ಯವಾಗಿಲ್ಲ. ಪ್ರಭಾವಿ ಶಾಸಕರಿಗೂ, ತಮ್ಮ ಪುತ್ರ ಎಲ್ಲಿದ್ದಾನೆ ಎನ್ನುವುದು ಗೊತ್ತಿಲ್ಲ. ಆದರೆ, ಇಷ್ಟೆಲ್ಲ ಗಲಾಟೆಗಳ ನಡುವೆಯೇ, ಆರೋಪಿ ಮಹಮ್ಮದ್ ನಲಪ್ಪಾಡ್, ಡಾ.ರಾಜ್ ಮೊಮ್ಮಗ ಗುರುರಾಜ್ ಕುಮಾರ್ ಅವರ ಮೇಲೂ ಹಲ್ಲೆ ಮಾಡಿದ್ದಾನೆ ಅನ್ನೋ ಸುದ್ದಿ ಹರಿದಾಡಿತ್ತು. ಅಣ್ಣಾವ್ರ ಮೊಮ್ಮಗನಿಗೇ ಹೊಡೀತಾರೆ ಅಂದ್ರೆ... ಅನ್ನೋ ಕಿಚ್ಚು ಹೊತ್ತಿಕೊಳ್ಳುವ ಎಲ್ಲ ಸಾಧ್ಯತೆಗಳೂ ಇದ್ದವು.

ಈ ಕುರಿತು ಸ್ವತಃ ಗುರುರಾಜ್ ಕುಮಾರ್ ಸ್ಪಷ್ಟನೆ ಕೊಟ್ಟಿದ್ದಾರೆ. ಗುರು ರಾಜ್‍ಕುಮಾರ್, ರಾಘವೇಂದ್ರ ರಾಜ್‍ಕುಮಾರ್ ಅವರ 2ನೇ ಮಗ. ಈಗ ಹಲ್ಲೆಗೊಳಗಾಗಿರುವ ವಿದ್ವತ್, ಗುರು ಅವರ ಸ್ನೇಹಿತ. ಹಲ್ಲೆಯಾದಾಗ ಗುರು, ಸ್ಥಳದಲ್ಲಿ ಇರಲಿಲ್ಲ. ಆದರೆ, ಹಲ್ಲೆಯ ನಂತರ ತಕ್ಷಣ ಮಲ್ಯ ಆಸ್ಪತ್ರೆಗೆ ಹೋಗಿದ್ದಾರೆ. ಗೆಳೆಯನನ್ನು ಆಸ್ಪತ್ರೆಗೆ ದಾಖಲಿಸೋಕೆ, ಚಿಕಿತ್ಸೆಗೆ ಓಡಾಡಿದ್ದಾರೆ. ಆ ಸಂದರ್ಭದಲ್ಲಿ ಆರೋಪಿ ಮಹಮ್ಮದ್ ನಾಲಪ್ಪಾಡ್ ಮಲ್ಯ ಆಸ್ಪತ್ರೆಯಲ್ಲಿಯೇ ಇದ್ದ. ಆತನ ಸಹಚರರೂ ಇದ್ದರು. 

ಆದರೆ, ಅವರ್ಯಾರೂ ನನ್ನ ಮೇಲೆ ಹಲ್ಲೆ ಮಾಡುವ ಅಥವಾ ಕೂಗಾಡುವ ಕೆಲಸ ಮಾಡಲಿಲ್ಲ. ನಾನೂ ಅವರನ್ನು ಮಾತನಾಡಿಸಲು ಹೋಗಲಿಲ್ಲ. ವಿದ್ವತ್ ದೇಹಸ್ಥಿತಿ ಒಂದು ಹಂತಕ್ಕೆ ಬಂದ ಮೇಲೆ, ಮನೆಗೆ ತೆರಳಿದೆ ಎಂದು ಸ್ಪಷ್ಟಪಡಿಸಿದ್ದಾರೆ ಗುರು ರಾಜ್‍ಕುಮಾರ್.

Padarasa Movie Gallery

Kumari 21 Movie Gallery