Print 
shivarajkumar, dhananjay, dubai tagaru

User Rating: 0 / 5

Star inactiveStar inactiveStar inactiveStar inactiveStar inactive
 
dubai fans craze for tagaru
Tagaru Dubai Fans Craze

ಶಿವರಾಜ್ ಕುಮಾರ್, ಸೂರಿ, ಶ್ರೀಕಾಂತ್ ಕಾಂಬಿನೇಷನ್‍ನ ಸಿನಿಮಾ ಟಗರು. ರಿಲೀಸ್‍ಗೆ ರೆಡಿಯಾಗಿರುವ ಟಗರು, ಚಿತ್ರರಂಗದಲ್ಲಿ ನಿರೀಕ್ಷೆಯ ಹವಾ ಸೃಷ್ಟಿಸಿದೆ. ಚಿತ್ರವನ್ನು ನೋಡೋಕೆ ಕರ್ನಾಟಕದಲ್ಲಷ್ಟೇ ಅಲ್ಲ, ವಿದೇಶಗಳಲ್ಲಿರುವ ಅಭಿಮಾನಿಗಳೂ ತುದಿಗಾಲಲ್ಲಿ ನಿಂತಿದ್ದಾರೆ.

ದುಬೈನಲ್ಲಿರುವ ಶಿವಣ್ಣ ಫ್ಯಾನ್ಸ್ ಕ್ಲಬ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗ್ರೂಪ್ ಸದಸ್ಯರು, ತಮ್ಮ ಕಾರುಗಳ ಮೇಲೆ ಟಗರು ಚಿತ್ರದ ಪೋಸ್ಟರ್ ಹಾಕಿಕೊಂಡು ರ್ಯಾಲಿ ಮಾಡಿದ್ದಾರೆ. ಅಷ್ಟೇ ಅಲ್ಲ, ಚಿತ್ರ ನೋಡೋಕೆ ಈಗಾಗಲೇ ಟಿಕೆಟ್ ಬುಕ್ ಮಾಡಿದ್ದಾರೆ. 

ಅಭಿಮಾನಿಗಳು ಸೇರಾದರೆ, ನಿರ್ಮಾಪಕ ಶ್ರೀಕಾಂತ್ ಸವ್ವಾಸೇರು. ಸ್ವತಃ ಶಿವರಾಜ್ ಕುಮಾರ್ ಅಭಿಮಾನಿಯಾಗಿರುವ  ಶ್ರೀಕಾಂತ್, ಈ ಅಭಿಮಾನಿಗಳನ್ನು ಕರೆತರಲು ವಿಮಾನ ನಿಲ್ದಾಣದಿಂದ ವಿಶೇಷ ಬಸ್ ವ್ಯವಸ್ಥೆಯನ್ನೇ ಮಾಡಿದ್ದಾರೆ. ಸಂತೋಷ್ ಚಿತ್ರಮಂದಿರದಲ್ಲಿ ಚಿತ್ರ ವೀಕ್ಷಣೆಗೆ ವ್ಯವಸ್ಥೆಯೂ ಆಗಿದೆ.