ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಪ್ರಶಾಂತ್ ರಾಜ್ ಕಾಂಬಿನೇಷನ್‍ನ ಆರೆಂಜ್ ಚಿತ್ರಕ್ಕೆ ನಾಯಕಿಯಾಗಿ ರಾಜಕುಮಾರಿಯೇ ಸಿಕ್ಕಿದ್ದಾಳೆ. ಈ ರಾಜಕುಮಾರಿ ಬೇರ್ಯಾರೂ ಅಲ್ಲ. `ರಾಜಕುಮಾರ'ನ ನಾಯಕಿ ಪ್ರಿಯಾ ಆನಂದ್.
ಚಿತ್ರದ ಕಥೆಗೆ ಪ್ರಿಯಾ ಆನಂದ್ ಸೂಕ್ತ ಎನಿಸಿತು. ಅವರಿಗೆ ಕಥೆ ಹೇಳಿದೆವು. ಅವರಂತೂ ತಮ್ಮ ಪಾತ್ರದ ಬಗ್ಗೆ ಎಕ್ಸೈಟ್ ಆಗಿ ಒಪ್ಪಿಕೊಂಡಿದ್ದಾರೆ ಎಂದಿದ್ದಾರೆ ನಿರ್ದೇಶಕ ಪ್ರಶಾಂತ್ ರಾಜ್.
ಚಿತ್ರದಲ್ಲಿ ನಾಯಕಿಯ ಪಾತ್ರ, ಸಂಪತ್ತಿಗೆ ಸವಾಲ್ ಮಂಜುಳಾ ಅವರನ್ನು ನೆನಪಿಸುತ್ತಂತೆ. ಅಲ್ಲಿಗೆ ರಾಜಕುಮಾರನ ರಾಜಕುಮಾರಿ, ಗಣೇಶ್ ಪಾಲಿನ ದುರ್ಗೆಯಾಗುತ್ತಿದ್ದಾರೆ.