` ಹರಾಜಿಗೆ ಬಂದಿವೆ ಬಾಲಚಂದರ್ ಆಸ್ತಿಗಳು..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
k balachandar properties to be auctioned by bank?
K Balachandar Image

ಕೆ. ಬಾಲಚಂದರ್. ಅವರು ಒಂದು ರೀತಿಯಲ್ಲಿ ಸೂಪರ್‍ಸ್ಟಾರ್‍ಗಳ ಗುರು ಎಂದರೂ ತಪ್ಪಲ್ಲ. ರಜಿನಿಕಾಂತ್, ಕಮಲ್‍ಹಾಸನ್.. ಅವರು ಸೃಷ್ಟಿಸಿದ ಎರಡು ನಕ್ಷತ್ರಗಳು. ಇನ್ನು ಪ್ರಕಾಶ್ ರೈ, ರಮೇಶ್ ಅರವಿಂದ್ ಸೇರಿದಂತೆ ನೂರಾರು ಕಲಾವಿದರು ಅವರ ಗರಡಿಯಲ್ಲಿ ಪಳಗಿದವರೇ. ಕನ್ನದಲ್ಲಿ ತಪ್ಪಿದ ತಾಳ, ಬೆಂಕಿಯಲ್ಲಿ ಅರಳಿದ ಹೂವು, ಎರಡು ರೇಖೆಗಳು, ಸುಂದರ ಸ್ವಪ್ನಗಳು, ಮುಗಿಲ ಮಲ್ಲಿಗೆ ಚಿತ್ರಗಳನ್ನು ನಿರ್ದೇಶಿಸಿದ್ದ ಬಾಲಚಂದರ್, ತಮಿಳಿನಲ್ಲಿ ದೊಡ್ಡ ಹೆಸರು. 2015ರಲ್ಲಿ ನಿಧನರಾದ ಬಾಲಚಂದರ್ ಕುಟುಂಬ ಈಗ ಸಂಕಷ್ಟದಲ್ಲಿದೆ.

ಕೊನೆಗಾಲದಲ್ಲಿ ಚಿಕಿತ್ಸೆಗೆ ಹಣವಿಲ್ಲದೆ ಬಾಲಚಂದರ್, ತಮ್ಮ ಆಸ್ತಿಯನ್ನು ಯುಕೋ ಬ್ಯಾಂಕ್‍ನಲ್ಲಿ ಅಡಮಾನವಿಟ್ಟಿದ್ದರು. ಅವರ ಮನೆ, ಕಚೇರಿ ಹಾಗೂ ಕೆಲವು ಆಸ್ತಿಗಳನ್ನು ಅಡಮಾನವಿಟ್ಟಿದ್ದ ಬಾಲಚಂದರ್, ಚಿಕಿತ್ಸೆ ಯಶಸ್ವಿಯಾಗದೆ ನಿಧನರಾಗಿದ್ದರು. ತದನಂತರ ಅಸಲು, ಬಡ್ಡಿ ಎರಡೂ ಸೇರಿ 1.3 ಕೋಟಿಗೆ ಬೆಳೆದು ನಿಂತಿದೆ ಸಾಲ. ಈಗ ಯುಕೋ ಬ್ಯಾಂಕ್ ಪ್ರಕಟಿಸಿರುವ ಸುಸ್ತಿದಾರರ ಪಟ್ಟಿಯಲ್ಲಿ ಬಾಲಚಂದರ್ ಹೆಸರಿದೆಯಂತೆ.