` ಮಾರ್ಚ್ 1, ಥಿಯೇಟರ್‍ಗಳಲ್ಲಿ ಸಿನಿಮಾ ಇರಲ್ಲ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
no new kannada, telugu, tamil, malayalam movies on march 1st
No New Films On March 1st

ಮಾರ್ಚ್ 1, ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಇರಲ್ಲ. ಆ ದಿನ ಕನ್ನಡವೂ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಭಾಷೆಯ ಸಿನಿಮಾ ನೋಡೋಕೆ ಆಗಲ್ಲ. ಯಾವುದೇ ಸಿನಿಮಾ ಪ್ರದರ್ಶನ ಇರಲ್ಲ. ಇದು ಕೇವಲ ಕನ್ನಡದ ಮಾತಾಯಿತು. ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯ ಸಿನಿಮಾಗಳು ಅದಾದ ನಂತರವೂ ಪ್ರದರ್ಶನವಾಗದೇ ಇರಬಹುದು. ಅಂದಹಾಗೆ ಇದು ಕೇವಲ ಬೆಂಗಳೂರಿನ ಕಥೆಯಲ್ಲ, ತಮಿಳುನಾಡು, ಆಂಧ್ರಪ್ರದೇಶ, ಕೇರಳ ಸೇರಿದಂತೆ ಯಾವ ರಾಜ್ಯದಲ್ಲೂ ಸಿನಿಮಾ ಪ್ರದರ್ಶನ ಆಗುವುದಿಲ್ಲ.

ಇಷ್ಟಕ್ಕೂ ಕಾರಣವೇನು ಗೊತ್ತಾ..? ದಕ್ಷಿಣ ಭಾರತದ ಚಿತ್ರೋದ್ಯಮ ನೇರವಾಗಿ ಸಿನಿಮಾ ಪ್ರಸಾರ ಸಂಸ್ಥೆ ಕ್ಯೂಬ್, ಯುಎಫ್‍ಓ ವಿರುದ್ಧ ಸಮರ ಸಾರಿಬಿಟ್ಟಿವೆ. ಕಾರಣ ಇಷ್ಟೆ, ಈ ಎರಡೂ ಸಂಸ್ಥೆಗಳು ಥಿಯೇಟರುಗಳಲ್ಲಿ ಸುಮಾರು 10 ವರ್ಷಗಳಿಂದ ಏಕಸ್ವಾಮ್ಯ ಸಾಧಿಸಿಬಿಟ್ಟಿವೆ. ಈ ಸಂಸ್ಥೆಗಳಿಗಿಂತ ಕಡಿಮೆ ಬೆಲೆಗೆ ಪ್ರಸಾರ ವ್ಯವಸ್ಥೆ ಮಾಡುವ ಸಂಸ್ಥೆಗಳಿದ್ದರೂ, ಅವಕಾಶ ಕೊಡುತ್ತಿಲ್ಲ. ಅಷ್ಟೇ ಅಲ್ಲ, ಸಿನಿಮಾ ಪ್ರದರ್ಶನ ವೇಳೆ ಪ್ರಸಾರ ಮಾಡುವ ಜಾಹೀರಾತುಗಳಲ್ಲಿಯೂ ಚಿತ್ರ ನಿರ್ಮಾಪಕರಿಗೆ ಪಾಲು ಸಿಗುತ್ತಿಲ್ಲ. ಒಂದು ಕಡೆ ಚಿತ್ರ ನಿರ್ಮಾಪಕರಿಂದ ಸಿನಿಮಾ ಪ್ರಸಾರಕ್ಕೆ ದುಬಾರಿ ಶುಲ್ಕ ಪಡೆಯುವುದಲ್ಲದೆ, ಮತ್ತೊಂದು ಕಡೆಯಿಂದ ಜಾಹೀರಾತಿನ ಮೂಲಕವೂ ಹಣ ಪಡೆಯುತ್ತದೆ. ಆದರೆ, ಅದರಲ್ಲಿ ಸರಿಯಾದ ಹಂಚಿಕೆ ನಡೆಯತ್ತಿಲ್ಲ ಎನ್ನುವುದು ನಿರ್ಮಾಪಕರ ದೂರು.

ಈ ಕುರಿತು ದಕ್ಷಿಣ ಭಾರತ ಫಿಲ್ಮ್ ಚೇಂಬರ್ ನೋಟಿಸ್ ನೀಡಿದ್ದರೂ, 4 ತಿಂಗಳಿಂದ ಅದಕ್ಕೆ ಸ್ಪಂದಿಸಿರಲಿಲ್ಲ. ಹೀಗಾಗಿ ಮಾರ್ಚ್ 1ರಂದು ಚಿತ್ರಮಂದಿರಗಳಲ್ಲಿ ಪ್ರದರ್ಶನ ಬಂದ್ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕರ್ನಾಟಕ ಫಿಲ್ಮ್ ಚೇಂಬರ್ ಕೂಡಾ ಈ ಬಂದ್‍ಗೆ ಬೆಂಬಲ ನೀಡಿದೆ. ಆದರೆ, ಬೇರೆ ಭಾಷೆಗಳವರು ಮಾರ್ಚ್ 1 ರ ನಂತರವೂ ಪ್ರದರ್ಶನ ನಿಲ್ಲಿಸಲಿದ್ದಾರೆ. ಕನ್ನಡ ಚಿತ್ರಗಳು ಮಾರ್ಚ್ 1ರಂದು ಮಾತ್ರ ಪ್ರದರ್ಶನ ನಿಲ್ಲಿಸಲಿವೆ.

ಫೆಬ್ರವರಿ 16ರಂದು ಚೆನ್ನೈನಲ್ಲಿ ಈ ಕುರಿತು ಎಲ್ಲ ಒಕ್ಕೂಟಗಳೂ ಸಭೆ ನಡೆಸಲಿವೆ. ಯುಎಫ್‍ಓ, ಕ್ಯೂಬ್ ಸಂಸ್ಥೆಗಳ ಪ್ರತಿನಿಧಿಗಳೂ ಆ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅದಾದ ನಂತರ ಫೆಬ್ರವರಿ 19ರಂದು ಬೆಂಗಳೂರಿನಲ್ಲಿ ಅಂತಿಮ ಸಭೆ ನಡೆಯಲಿದೆ. ಒಟ್ಟಿನಲ್ಲಿ ಸಿನಿಮಾ ಪ್ರದರ್ಶನ ಇಲ್ಲದ ದಿನಗಳಂತೂ ಮಾರ್ಚ್‍ನಲ್ಲಿ ಕಾದಿವೆ. ಅಕಸ್ಮಾತ್, ಹಣಕಾಸಿನ ಹಂಚಿಕೆ ವ್ಯವಹಾರ, ಸೇವಾಶುಲ್ಕ ಕಡಿತಗೊಳಿಸುವ ವಿಚಾರದಲ್ಲಿ ಒಮ್ಮತ ಮೂಡಿದರೆ, ಸಿನಿಮಾ ಪ್ರದರ್ಶನ ಎಂದಿನಂತೆ ಮುಂದುವರಿಯಬಹುದು. 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery