` ಆಶ್ರಮಕ್ಕೆ ಹಣ ಕೊಟ್ಟರಷ್ಟೇ ಬರ್ತಾರೆ ಪ್ರಥಮ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
pay this ashram money to invite pratham for your function
Pratham

ಒಳ್ಳೆಯ ಹುಡುಗ ಪ್ರಥಮ್, ತಾವೇಕೆ ಒಳ್ಳೆಯ ಹುಡುಗ ಅನ್ನೋದನ್ನ ಮತ್ತೊಮ್ಮೆ ಪ್ರೂವ್ ಮಾಡಿಬಿಟ್ಟಿದ್ದಾರೆ. ಇಷ್ಟಕ್ಕೂ ಆಗಿರೋದು ಇಷ್ಟು. ಇತ್ತೀಚೆಗೆ ಪ್ರಥಮ್ ಮಂಗಳೂರಿಗೆ ಹೋಗಿದ್ದರು. ಮಂಗಳೂರಿನಲ್ಲಿ ತಬಸ್ಸಮ್ ಮತ್ತು ರಶೀದ್ ವಿಟ್ಲ ಎಂಬುವವರು ನಡೆಸ್ತಿರೋ ಅನಾಥಾಶ್ರಮಕ್ಕೆ ಭೇಟಿ ಕೊಟ್ಟರು. ಅದು ಹೆಚ್‍ಐವಿ ಸೋಂಕಿರುವ ಮಕ್ಕಳ ಅನಾಥಾಶ್ರಮ. ಪ್ರಥಮ್‍ಗೆ ಅದು ಅಪೂರ್ವ ಎನಿಸಿಬಿಟ್ಟಿತು. ಸ್ವಲ್ಪ ಹಣವನ್ನು ಕೊಟ್ಟ ಪ್ರಥಮ್, ಅಲ್ಲಿಯೇ ಒಂದು ನಿರ್ಧಾರ ತೆಗೆದುಕೊಂಡುಬಿಟ್ಟರು. 

ಇನ್ನು ಮುಂದೆ ಪ್ರಥಮ್ ಅವರನ್ನು ನಿಮ್ಮ ಊರಿನ ಅಥವಾ ಇನ್ಯಾವುದೆ ಕಾರ್ಯಕ್ರಮಕ್ಕೆ ಕರೆಯಬೇಕೆಂದರೂ ಹಣ ಕೊಡಬೇಕು. ಅದನ್ನು ನೀವು ಪ್ರಥಮ್ ಅವರಿಗೇನೂ ಕೊಡಬೇಕಿಲ್ಲ. ಮಂಗಳೂರಿನಲ್ಲಿರುವ ಈ ಆಶ್ರಮಕ್ಕೆ ಹಣ ಕೊಡಬೇಕು. ಆಶ್ರಮಕ್ಕೆ ಹಣ ಕೊಡುವುದಾದರೆ ಮಾತ್ರ ಪ್ರಥಮ್, ಕಾರ್ಯಕ್ರಮಕ್ಕೆ ಬರ್ತಾರೆ.

ಅಂದಹಾಗೆ ಆಶ್ರಮದ ಅಕೌಂಟ್ ಇರೋದು ಸ್ನೇಹದೀಪ ಕಾರ್ಪೊರೇಷನ್ ಬ್ಯಾಂಕ್‍ನಲ್ಲಿ. ಪೋಂಜಾ ಆರ್ಕೇಡ್, ಹಂಪನಕಟ್ಟೆಯಲ್ಲಿ. ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಆಶ್ರಮದ ಅಕೌಂಟ್ ನಂಬರ್ ಹಾಗೂ ಐಎಫ್‍ಎಸ್‍ಸಿ ಕೋಡ್‍ನ್ನು ಹಾಕಿರುವ ಪ್ರಥಮ್, ಅಭಿಮಾನಿಗಳಿಗೆ ಮನವಿ ಮಾಡುತ್ತಿದ್ದಾರೆ.

ಈಗ ಪ್ರಥಮ್ ಅವರನ್ನು ಕಾರ್ಯಕ್ರಮಕ್ಕೆ ಕರೆಯುವವರು ಈ ಆಶ್ರಮಕ್ಕೆ ಹಣ ಕೊಟ್ಟರೆ, ಎರಡು ಕೆಲಸಗಳಾಗುತ್ತವೆ. ಒಂದು, ಪ್ರಥಮ್‍ರನ್ನು ನಿಮ್ಮ ಕಾರ್ಯಕ್ರಮಕ್ಕೆ ಕರೆತಂದು ಸಂಭ್ರಮಿಸಿದ ಖುಷಿ. ಇನ್ನೊಂದು ಆಶ್ರಮಕ್ಕೆ ಹಣ ಕೊಟ್ಟು, ಆ ಅನಾಥ ಮುಖಗಳಲ್ಲಿ ನಗು ಮೂಡಿಸಿದ ತೃಪ್ತಿ. ಪ್ರಥಮ್‍ಗೆ ಹ್ಯಾಟ್ಸಾಫ್ ಹೇಳಲೇಬೇಕಲ್ಲವೇ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery