` ಚಿಕ್ಕಣ್ಣ ಕೂಡಾ ಈಗ ನಿರ್ಮಾಪಕ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
chikkanna also a producer for rambo 2
Chikkanna, Sharan Image From Raj Vishnu Movie

Rambo ಸಿನಿಮಾ ನೆನಪಿದೆಯಲ್ವಾ..? ಶರಣ್‍ರನ್ನು ಸ್ಟಾರ್ ಆಗಿಸಿದ ಸಿನಿಮಾ ಅದು. ಈಗ Rambo 2 ಬರುತ್ತಿದೆ. ಮತ್ತೊಮ್ಮೆ Rambo ಟೀಂ ಜೊತೆಯಾಗಿದೆ. ಒನ್ಸ್ ಎಗೇಯ್ನ್, ಅದು ತಂತ್ರಜ್ಞರೇ ಸೇರಿ ನಿರ್ಮಿಸುತ್ತಿರುವ ಚಿತ್ರ. ಅಂದರೆ, ಚಿತ್ರದ ತಂತ್ರಜ್ಞರೆಲ್ಲರೂ ಚಿತ್ರಕ್ಕೆ ನಿರ್ಮಾಪಕರೇ. ಲಾಭ ಬಂದರೆ, ಪ್ರತಿಯೊಬ್ಬರಿಗೂ ಷೇರ್ ಸಿಗಲಿದೆ. ಅದು ಶರಣ್ ರೂಪಿಸಿರುವ ತತ್ವ.

ಅಂದಹಾಗೆ ಚಿತ್ರದ ನಿರ್ಮಾಪಕರಲ್ಲಿ ಚಿಕ್ಕಣ್ಣ ಕೂಡಾ ಒಬ್ಬರು. ಕಾಮಿಡಿ ಕಿಲಾಡಿಗಳು ಮೂಲಕ ಕನ್ನಡಿಗರಿಗೆ ಪರಿಚಿತರಾದ ಚಿಕ್ಕಣ್ಣ, ಹುಟ್ಟು ಶ್ರೀಮಂತರೇನಲ್ಲ. ಕೇವಲ ಪ್ರತಿಭೆಯೊಂದನ್ನೇ ಬಂಡವಾಳವನ್ನಾಗಿಸಿಕೊಂಡ ಚಿಕ್ಕಣ್ಣ, Rambo 2 ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ. ಅದು ಚಿಕ್ಕಣ್ಣ ಸಾಧನೆಯಷ್ಟೇ ಅಲ್ಲ, ಶರಣ್ ಔದಾರ್ಯವೂ ಹೌದು.

ಲಡ್ಡು ಸಿನಿಮಾಸ್ ಬ್ಯಾನರ್‍ನಲ್ಲಿ ಬರುತ್ತಿರುವ ಚಿತ್ರಕ್ಕೆ ಶರಣ್ ಹಾಗೂ ಅಟ್ಲಾಂಟಾ ನಾಗೇಂದ್ರ ಅಧಿಕೃತ  ನಿರ್ಮಾಪಕರು. ಉಳಿದಂತೆ ಚಿಕ್ಕಣ್ಣ, ಛಾಯಾಗ್ರಹಕ ಸುಧಾಕರ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ, ಸಂಕಲನಕಾರ ಕೆ.ಎಂ.ಪ್ರಕಾಶ್, ಕಲಾ ನಿರ್ದೇಶಕ ಮೋಹನ್ ಬಿ. ಕೆರೆ, ಮ್ಯಾನೇಜರ್ ನರಸಿಂಹ ಹೀಗೆ ಚಿತ್ರದ ತಾಂತ್ರಿಕ ವರ್ಗದವರೆಲ್ಲ ವರ್ಕಿಂಗ್ ಪಾರ್ಟ್‍ನರ್ಸ್. 

 

 

Rambo 2 Movie Gallery

https://www.chitraloka.com/movie-reviews/17656-rambo-2-movie-review-chitraloka-rating-3-5-5.html

Raja Loves Radhe Movie Gallery