` ಅದೇ ಕಣ್ಣು.. ಅದೇ ಕಣ್ಣು.. ಕಣ್ತೆರೆದು ನೋಡಿದಾಗ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
raghu hopes of getting help from producer
Raghu

ಇದು ಕಣ್ಣಿನ ಕಥೆ. ಪ್ರೀತಿಗಾಗಿ ಕಣ್ಣು ಕಳೆದುಕೊಂಡವನ ಕಥೆ. ಕಣ್ಣಿಲ್ಲದೆ ನರಳುತ್ತಿರುವ ರಘುವಿಗೆ ಹೊಸ ಬೆಳಕು ನೀಡಲು ಹೊರಟಿರುವ ನಿರ್ಮಾಪಕರ ಕಥೆ. ರಘುವೀರ ಚಿತ್ರದ ನಿರ್ಮಾಪಕಿ ಧೇನು ಅಚ್ಚಪ್ಪ, ರಘುವಿನ ಕಣ್ಣಿಗೆ ಚಿಕಿತ್ಸೆ ಕೊಡಿಸುವ ಭರವಸೆ ಕೊಟ್ಟಿದ್ದಾರೆ.

ರಘುವೀರ ಚಿತ್ರದಲ್ಲಿರೋದು ಜಿಮ್ ರಘುವಿನ ಕಥೆ. ಕೆಲವು ವರ್ಷಗಳ ಹಿಂದೆ ಪ್ರೀತಿಸಿದ ಹುಡುಗಿಯ ಮದುವೆಗೆ ಹೋಗಿ, ಹುಡುಗಿಯ ಕಡೆಯವರು ಹಲ್ಲೆ ಮಾಡಿದಾಗ ಕಣ್ಣನ್ನೇ ಕಳೆದುಕೊಂಡಿದ್ದ ರಘುವಿನ ಕಥೆ. ಚಿತ್ರಕ್ಕೆ ಕಥೆ ಬರೆದಿರುವುದು ಸ್ವತಃ ಜಿಮ್ ರಘು.

ಘಟನೆಯಾದಾಗ ಹಲವರು ಜಿಮ್ ರಘುವಿಗೆ ನೆರವಾದರು. ಆದರೆ, ಈಗ ಲಂಡನ್‍ನಲ್ಲಿ ಲಭ್ಯವಿರುವ ವಿಶೇಷ ಚಿಕಿತ್ಸೆಯಿಂದ ರಘುವಿಗೆ ಕಣ್ಣು ಬರಬಹುದು ಎಂಬ ಭರವಸೆ ಸಿಕ್ಕಿದೆಯಂತೆ. ಚಿತ್ರ ಬಿಡುಗಡೆಯ ಹೊತ್ತಿನಲ್ಲಿ ಈ ವಿಷಯ ಗೊತ್ತಾಗಿದ್ದಷ್ಟೇ ಅಲ್ಲ, ರಘುವೀರ ಚಿತ್ರ ನಿರ್ಮಾಪಕಿಯಿಂದಲೂ ಚಿಕಿತ್ಸೆ ಸಿಗುವ ಭರವಸೆ ರಘುವಿಗೆ ಸಿಕ್ಕಿದೆ.

ರಘುವೀರ ಚಿತ್ರದ ನಿರ್ಮಾಪಕಿ ಕಮ್ ನಾಯಕಿ ಧೇನು ಅಚ್ಚಪ್ಪಗೆ, ರಘು ಹೊಸಬನಲ್ಲ. ಬಾಲ್ಯದಿಂದಲೂ ನೋಡಿದ್ದ ಯುವಕ. ಹೀಗಾಗಿ ಸ್ನೇಹವೂ ಇದೆ. ಇನ್ನು ಚಿತ್ರದ ನಾಯಕ ರಾಜಾಹುಲಿ ಖ್ಯಾತಿಯ ಹರ್ಷ ಕೂಡಾ ರಘುವಿನ ಗೆಳೆಯ. ಹೀಗೆ ಇಡೀ ಚಿತ್ರದಲ್ಲಿ ಸ್ನೇಹಿತರೇ ಇದ್ದಾರೆ. ಪ್ರೇಕ್ಷಕರ ಎದುರು ಈ ಚಿತ್ರ ಇದೇ ವಾರ ತೆರೆಗೆ ಬರುತ್ತಿದೆ.

Rambo 2 Movie Gallery

https://www.chitraloka.com/movie-reviews/17656-rambo-2-movie-review-chitraloka-rating-3-5-5.html

Raja Loves Radhe Movie Gallery