` ಶ್ರಿಯಾ ಸರಣ್ ಮದುವೆ ಸುಳ್ಳೇಸುಳ್ಳು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
shriya saran rejects her marriage rumors
Shriya Saran Image

ಶ್ರಿಯಾ ಸರಣ್, ದಕ್ಷಿಣ ಭಾರತ ಚಿತ್ರರಂಗದವರಿಗೆ, ಕನ್ನಡದವರಿಗೆ ಹೊಸಬರೇನೂ ಅಲ್ಲ. ಶ್ರಿಯಾ ಕನ್ನಡದಲ್ಲಿ ನಟಿಸಿರುವುದು ಎರಡೇ ಚಿತ್ರಗಳಲ್ಲಿ. ಅರಸು ಚಿತ್ರದ ಕ್ಲೈಮಾಕ್ಸ್‍ನಲ್ಲಿ ಕಾಣಿಸಿಕೊಂಡಿದ್ದ ಶ್ರಿಯಾ, ನಂತರ ಅಭಿನಯಿಸಿದ್ದು ಚಂದ್ರ ಚಿತ್ರದಲ್ಲಿ. ರಜಿನಿಕಾಂತ್, ಚಿರಂಜೀವಿ, ವೆಂಕಟೇಶ್, ಪ್ರಭಾಸ್, ವಿಜಯ್, ಅಜಯ್ ದೇವಗನ್ ಸೇರಿದಂತೆ ಚಿತ್ರರಂಗದ ಘಟಾನುಘಟಿಗಳ ಜೊತೆ ನಟಿಸಿರುವ ಶ್ರಿಯಾ ಸರಣ್ ಕುರಿತು, ಒಂದು ಸುದ್ದಿ ಇದ್ದಕ್ಕಿದ್ದಂತೆ ವೈರಲ್ ಆಗಿತ್ತು.

ಶ್ರಿಯಾ ಸರಣ್ ಮದುವೆಯಾಗ್ತಿದ್ದಾರಂತೆ. ರಷ್ಯನ್ ಗೆಳೆಯನ ಜೊತೆ ಎಂಗೇಜ್‍ಮೆಂಟ್ ಫಿಕ್ಸ್ ಆಗಿದೆಯಂತೆ. ರಾಜಸ್ಥಾನದಲ್ಲಿ ಮದುವೆಯೂ ನಡೆಯಲಿದೆಯಂತೆ ಅನ್ನೋದು ಸುದ್ದಿ. ಅದನ್ನೆಲ್ಲ ಶ್ರಿಯಾ ನಿರಾಕರಿಸಿದ್ದಾರೆ.

ಆಗಿದ್ದೇನೆಂದರೆ, ಮದುವೆಯಾಗುತ್ತಿರುವುದು ನಿಜ. ಆದರೆ, ಶ್ರಿಯಾ ಅವರದ್ದಲ್ಲ, ಅವರ ಗೆಳತಿಯದ್ದು. ಗೆಳತಿಯ ಮದುವೆಗೆ ಬಟ್ಟೆ, ಒಡವೆ ಖರೀದಿಗೆ ಹೋಗಿದ್ದರಂತೆ ಶ್ರಿಯಾ. ಅದೇ ಈಗ ದೊಡ್ಡ ಸುದ್ದಿಯಾಗಿಬಿಟ್ಟಿದೆ.

ಮದುವೆಯ ಸುದ್ದಿ ಎಂದು ಈಗ ಸ್ವತಃ ಶ್ರಿಯಾ ಸರಣ್ ಹಾಗೂ ಅವರ ತಾಯಿ ಸ್ಪಷ್ಟನೆ ಕೊಟ್ಟಿದ್ದಾರೆ.

Rambo 2 Movie Gallery

https://www.chitraloka.com/movie-reviews/17656-rambo-2-movie-review-chitraloka-rating-3-5-5.html

Raja Loves Radhe Movie Gallery