ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 51ನೇ ಚಿತ್ರಕ್ಕೆ ಈಗಾಗಲೇ ನಾಯಕಿಯ ಆಯ್ಕೆ ಆಗಿದೆ. ರಶ್ಮಿಕಾ ಮಂದಣ್ಣ, ನಾಯಕಿಯಾಗಿರುವ ಆ ಚಿತ್ರಕ್ಕೆ ಇನ್ನೊಬ್ಬ ನಾಯಕಿಯ ಅಗತ್ಯವಿತ್ತು. ಆ ಜಾಗಕ್ಕೆ ಈಗ ತಾನ್ಯಾ ಹೋಪ್ ದರ್ಶನ್‍ಗೆ ನಾಯಕಿಯಾಗಿ ಬಂದಿದ್ದಾರೆ. ಚಿತ್ರದ 2ನೇ ನಾಯಕಿ ತಾನ್ಯಾ ಹೋಪ್.
ಅವರ ಅಭಿನಯದ ಮೊದಲ ಕನ್ನಡ ಸಿನಿಮಾ ಇನ್ನೂ ರಿಲೀಸ್ ಆಗಿಲ್ಲ. ಶೂಟಿಂಗ್ ಹಂತದಲ್ಲಿದೆ. ಹೀಗಿರುವಾಗಲೇ ಮತ್ತೊಬ್ಬ ಸ್ಟಾರ್ ನಟನ ಚಿತ್ರಕ್ಕೆ ಆಫರ್ ಬಂದಿರುವುದು ತಾನ್ಯಾ ಅವರ ಖುಷಿ ಹೆಚ್ಚಿಸಿದೆ. ಅಂದಹಾಗೆ ತಾನ್ಯಾ ಈಗಾಗಲೇ ನಟಿಸುತ್ತಿರುವ ಮೊದಲ ಕನ್ನಡ ಚಿತ್ರ ಹೋಮ್ ಮಿನಿಸ್ಟರ್. ಆ ಚಿತ್ರಕ್ಕೆ ಉಪೇಂದ್ರ ನಾಯಕ. ಉಪೇಂದ್ರ ಅವರ ಪ್ರಜಾಕೀಯದ ಬ್ಯುಸಿಯಲ್ಲಿ ಆ ಚಿತ್ರ ನಿಧಾನವಾಗುತ್ತಿರುವಾಗಲೇ ದರ್ಶನ್ ಚಿತ್ರದ ಚಾನ್ಸ್ ಸಿಕ್ಕಿದೆ.
ಚಿತ್ರದಲ್ಲಿ ತಾನ್ಯಾಗೆ 2 ಡ್ಯಾನ್ಸ್, ಅಭಿನಯಕ್ಕೆ ಭರಪೂರ ಅವಕಾಶಗಳಿವೆಯಂತೆ. ದರ್ಶನ್ ಚಿತ್ರದ ಚಾನ್ಸ್ ಸಿಕ್ಕಿರೋದ್ರಿಂದ ಥ್ರಿಲ್ಲಾಗಿರುವುದಂತೂ ನಿಜ. ಅವರ ಬಗ್ಗೆ ಕೇಳಿದ್ದೇನೆ. ಆದರೆ, ನೋಡಿಲ್ಲ. ಇನ್ನು ಮೇಲೆ ಅವನ್ನೆಲ್ಲ ನೋಡುತ್ತೇನೆ ಎಂದು ಖುಷಿಯಾಗಿದ್ದಾರೆ ತಾನ್ಯಾ.