ಶಿವರಾಜ್ ಕುಮಾರ್ ಮತ್ತು ದುನಿಯಾ ಸೂರಿ ಮತ್ತೊಮ್ಮೆ ಜೊತೆಯಾಗಿರುವ ಚಿತ್ರ ಟಗರು. ರಿಲೀಸ್ ಆಗುತ್ತಿರುವುದು ಇದೇ ತಿಂಗಳು 23ಕ್ಕೆ. ಅಂದಹಾಗೆ ಅದು ಅದೃಷ್ಟದ ದಿನ. ಯಾಕೆ ಅಂತೀರಾ..? ಸರಿಯಾಗಿ 11 ವರ್ಷಗಳ ಹಿಂದೆ ಇದೇ ಫೆಬ್ರವರಿ 23ರಂದು ಕನ್ನಡ ಚಿತ್ರದಲ್ಲೊಂದು ಅದ್ಭುತ ಸಿನಿಮಾ ತೆರೆಕಂಡಿತ್ತು. ಅದು ದುನಿಯಾ ಸಿನಿಮಾ.
ದುನಿಯಾ ಸಿನಿಮಾ ಬಿಡುಗಡೆಯಾದ ದಿನವೇ ಟಗರು ಬಿಡುಗಡೆಯಾಗುತ್ತಿರುವುದು ದುನಿಯಾ ಸೂರಿ ಅವರನ್ನು ಥ್ರಿಲ್ಲಾಗಿಸಿದೆ. ಆ ಚಿತ್ರ ರಿಲೀಸ್ ಆಗುವವರೆಗೆ ಸೂರಿ ಯಾರೆಂಬುದು ಕನ್ನಡ ಚಿತ್ರರಂಗಕ್ಕೆ, ಕನ್ನಡಿಗರಿಗೆ ಗೊತ್ತಿರಲಿಲ್ಲ. ಈಗ ಅದೇ ದಿನ ರಿಲೀಸ್ ಆಗುತ್ತಿರುವ ಟಗರು ದುನಿಯಾ ಇತಿಹಾಸವನ್ನು ಮರುಸೃಷ್ಟಿಸಲಿದೆ ಎಂಬ ವಿಶ್ವಾಸದಲ್ಲಿದ್ದಾರೆ ಸೂರಿ.