` ದರ್ಶನ್ ಅಭಿಮಾನಿಯ ಕೊನೆಯ ಆಸೆ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
darshan fan revanth in death bed
Darshan with his fan Revanth

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಕೊರತೆಯೇನೂ ಇಲ್ಲ. ಅಭಿಮಾನಿಗಳನ್ನೇ ಯಜಮಾನರಂತೆ ಗೌರವಿಸುವ ದರ್ಶನ್ ಅಭಿಮಾನಿಯೊಬ್ಬ, ಈಗ ಸಾವಿನ ಜೊತೆ ಸೆಣಸುತ್ತಿದ್ದಾರೆ. ಶಿವಮೊಗ್ಗದ ರೇವಂತ್ ಎಂಬ ಈ ಯುವಕನಿಗೆ ಕ್ಯಾನ್ಸರ್. ಇನ್ನು ಬದುಕುವ ಸಾಧ್ಯತೆ ಇಲ್ಲ ಎಂದು ವೈದ್ಯರೂ ಕೈಚೆಲ್ಲಿಬಿಟ್ಟಿದ್ದಾರೆ.

ಪ್ರತಿ ವರ್ಷ ದರ್ಶನ್ ಹುಟ್ಟುಹಬ್ಬಕ್ಕೆ ಶಿವಮೊಗ್ಗದಿಂದ ಬೆಂಗಳೂರಿಗೆ ಬಂದು ಶುಭ ಹಾರೈಸಿ ಸಂಭ್ರಮಿಸುತ್ತಿದ್ದ ರೇವಂತ್, ಈಗ ಹಾಸಿಗೆ ಬಿಟ್ಟೇಳಲು ಆಗದ ಸ್ಥಿತಿಯಲ್ಲಿದ್ದಾರೆ. ದರ್ಶನ್ ಹುಟ್ಟುಹಬ್ಬ ಹತ್ತಿರ ಬರುತ್ತಿರುವಂತೆಯೇ ಈ ಬಾರಿ ಹುಟ್ಟುಹಬ್ಬಕ್ಕೆ ತಾನು ಹೋಗೋಕೆ ಸಾಧ್ಯವಾಗುತ್ತಿಲ್ಲ ಎಂಬ ನೋವು ಕಾಡೋಕೆ ಶುರುವಾಗಿದೆ.

ಸಾಯುವ ಮುನ್ನ ಒಮ್ಮೆ ದರ್ಶನ್ ಅವರನ್ನು ನೋಡಬೇಕು ಅನ್ನೋದು ಈ ಅಭಿಮಾನಿಯ ಆಸೆ. ಅಭಿಮಾನಿಗಳ ದಾಸ ದರ್ಶನ್, ಈ ಅಭಿಮಾನಿಯ ಬಯಕೆ ಈಡೇರಿಸ್ತಾರಾ..?

Rambo 2 Movie Gallery

https://www.chitraloka.com/movie-reviews/17656-rambo-2-movie-review-chitraloka-rating-3-5-5.html

Raja Loves Radhe Movie Gallery