ನಿರ್ದೇಶಕ ಜೋಗಿ ಪ್ರೇಮ್ ಡೈರೆಕ್ಷನ್ ಎಂದರೆ ಅದು ಸುದೀರ್ಘವಾಗುತ್ತೆ ಎಂಬುದು ಆರೋಪ. ಹಾಗೆ ನೋಡಿದರೆ, ದಿ ವಿಲನ್ ಚಿತ್ರ ಸ್ವಲ್ಪ ತಡವಾದರೂ, ಅದಕ್ಕೆ ಬೇರೆ ಬೇರೆಯೇ ಕಾರಣಗಳಿವೆ. ಇದೆಲ್ಲದರ ಮಧ್ಯೆಯೂ ದಿ ವಿಲನ್ ಚಿತ್ರದ ಶೂಟಿಂಗ್ ಕ್ಲೈಮಾಕ್ಸ್ ಹಂತಕ್ಕೆ ತಲುಪಿದೆ.
ಶಿವರಾಜ್ ಕುಮಾರ್ ಮತ್ತು ಸುದೀಪ್ ಒಟ್ಟಿಗೇ ನಟಿಸುತ್ತಿರುವ ಕನ್ನಡ ಚಿತ್ರರಂಗದ ಈ ಬಹುನಿರೀಕ್ಷಿತ ಚಿತ್ರದಲ್ಲಿ ನಾಯಕರ ದೃಶ್ಯ, ಹಾಡುಗಳ ಚಿತ್ರೀಕರಣ ಮುಕ್ತಾಯವಾಗಿದೆ. ಇನ್ನು ಕೆಲವು ಪೋಷಕ ನಟರ ದೃಶ್ಯಗಳ ಚಿತ್ರೀಕರಣ ಬಾಕಿಯಿದೆ. ಇನ್ನು ಕೆಲವೇ ದಿನಗಳಲ್ಲಿ ಕುಂಭಳಕಾಯಿ ಒಡೆಯೋದಾಗಿ ಚಿತ್ರತಂಡ ಹೇಳಿಕೊಂಡಿದೆ.