` ಎಸ್.ನಾರಾಯಣ್ ಬಕ್ರಾ ಆದ ಕಥೆಗಳು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
s narayan's experience with producers
S Narayan Image

ನಿರ್ದೇಶಕ ಎಸ್.ನಾರಾಯಣ್, ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು. ಡಾ.ರಾಜ್ ಕುಟುಂಬದ ಎಲ್ಲರ ಚಿತ್ರವನ್ನೂ ನಿರ್ದೇಶಿಸಿರುವ ಹೆಗ್ಗಳಿಕೆ ಇರುವುದು ನಾರಾಯಣ್‍ಗೆ ಮಾತ್ರ. ವಿಷ್ಣು, ಅಂಬಿ, ರವಿಚಂದ್ರನ್, ರಮೇಶ್, ಸುದೀಪ್, ದರ್ಶನ್, ಗಣೇಶ್, ದುನಿಯಾ ವಿಜಿ ಸೇರಿದಂತೆ ಕನ್ನಡ ಚಿತ್ರರಂಗದ ಎಲ್ಲ ಸ್ಟಾರ್‍ಗಳನ್ನೂ ನಿರ್ದೇಶಿಸಿರುವ ಏಕೈಕ ನಿರ್ದೇಶಕ. ಶ್ರೀಮುರಳಿ, ಅಮೂಲ್ಯ ಅವರು ಚಿತ್ರರಂಗಕ್ಕೆ ಪರಿಚಯಿಸಿದ ಪ್ರತಿಭೆಗಳು. ಇಂಥ ನಾರಾಯಣ್, ಬಾಕ್ಸಾಫೀಸ್‍ನಲ್ಲಿ ಅದ್ಭುತವನ್ನೇ ಸೃಷ್ಟಿಸಿದವರು. ಅಂಥಾ ನಾರಾಯಣ್‍ಗೆ ಕನ್ನಡ ಚಿತ್ರರಂಗದ ಕೆಲವು ನಿರ್ಮಾಪಕರು ಅದೆಷ್ಟು  ಯಾಮಾರಿಸಿದ್ದಾರೆ ಅನ್ನೋದನ್ನ ಅವರ ಬಾಯಲ್ಲೇ ಕೇಳಿ.

ಇದುವರೆಗೆ ನಾನು ಸ್ಕ್ರಿಪ್ಟ್ ಮಾಡಿ, ಕೈ ತಪ್ಪಿದ ಚಿತ್ರಗಳ ಸಂಖ್ಯೆ 18. ನನಗೆ ಬಿಡುವೇ ಇಲ್ಲ. ಸ್ಕ್ರಿಪ್ಟ್ ವರ್ಕ್ ನಡೆಯುತ್ತಲೇ ಇದೆ. ನಿರ್ಮಾಪಕರು ಬರೋರು, ನಾನು ಕಥೆ ಬರೆಯುತ್ತಿದೆ. ಎಷ್ಟೋ ಬಾರಿ ಸಂಗೀತ ಸಂಯೋಜನೆ ಲೆವೆಲ್‍ವರೆಗೂ ಬರೋದು. ಇದ್ದಕ್ಕಿದ್ದಂತೆ ಚಿತ್ರ ನಿಂತು ಹೋಗುತ್ತಿತ್ತು. ಎಲ್ಲ ಮುಗಿದು ಇನ್ನೇನು ಶೂಟಿಂಗ್ ಶುರುವಾಗಬೇಕು ಎನ್ನುವಷ್ಟರಲ್ಲಿ, ಅದೇ ಕಥೆಯನ್ನಿಟ್ಟುಕೊಂಡು ಇನ್ನೊಬ್ಬ ನಿರ್ದೇಶಕರ ಕೈಯ್ಯಲ್ಲಿ ಸಿನಿಮಾ ಮಾಡಿಸೋರು. ಅದು ಎಷ್ಟೋ ಬಾರಿ ಪೇಪರ್ ನೋಡಿದ ಮೇಲಷ್ಟೆ ನನಗೆ ಗೊತ್ತಾಗುತ್ತಿತ್ತು. ಹೀಗೆ ಕೈತಪ್ಪಿದ ಚಿತ್ರಗಳ ಸಂಖ್ಯೆ 18.

ಹೀಗೆ ತಮ್ಮ ಕಥೆ ಹೇಳಿಕೊಳ್ತಾರೆ ನಾರಾಯಣ್. ಅವರ ಮಗ ಪಂಕಜ್ ಅಭಿನಯದ ಹೊಸ ಚಿತ್ರದ ಮುಹೂರ್ತದ ವೇಳೆ ಹಳೆಯ ಅನುಭವಗಳನ್ನೆಲ್ಲ ಬಿಚ್ಚಿಟ್ಟಿರುವ ನಾರಾಯಣ್, ನಾವು ನಾವು ನತದೃಷ್ಟರೋ, ಬಕ್ರಾಗಳೋ ಗೊತ್ತಾಗ್ತಿಲ್ಲ. ಯಾರ ಮೇಲೆ ದೂರು ಹೇಳೋದು ಅನ್ನೋದು ಕೂಡಾ ಅರ್ಥವಾಗುತ್ತಿಲ್ಲ ಎಂದಿದ್ದಾರೆ. 

ಅಂದಹಾಗೆ ಅವರ ಮಗನ ಚಿತ್ರಕ್ಕೆ ಟೈಟಲ್ ಇನ್ನೂ ಇಟ್ಟಿಲ್ಲ. ಚಿತ್ರಕ್ಕೆ ಒಳ್ಳೆಯ ಟೈಟಲ್ ಸೂಚಿಸಿದವರಿಗೆ ಡೈಮಂಡ್ ನೆಕ್ಲೆಸ್‍ನ್ನು ಬಹುಮಾನವಾಗಿ ಕೊಡ್ತಾರಂತೆ ನಾರಾಯಣ್.

Rambo 2 Movie Gallery

https://www.chitraloka.com/movie-reviews/17656-rambo-2-movie-review-chitraloka-rating-3-5-5.html

Raja Loves Radhe Movie Gallery