` ಚಂದನ್ ಶೆಟ್ಟಿ ಜೊತೆ ಮದ್ವೆಯಂತೆ - ಅಗ್ನಿಸಾಕ್ಷಿ ವೈಷ್ಣವಿ ಹೇಳಿದ್ದೇನು..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
chandan shetty vaishnavi marriage rumors
Chandan Shetty, Vaishnavi Image

ಬಿಗ್‍ಬಾಸ್ ವಿನ್ನರ್ ಆಗಿ ಹೊರಬಂದ ಚಂದನ್ ಶೆಟ್ಟಿ ಮತ್ತು ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ವೈಷ್ಣವಿ ಗೌಡ ಮದುವೆಯಾಗುತ್ತಿದ್ದಾರಂತೆ. ಎಂಗೇಜ್‍ಮೆಂಟ್ ಆಗಲಿದೆಯಂತೆ. ಇಂಥಾದ್ದೊಂದು ಸುದ್ದಿ ಎಷ್ಟರಮಟ್ಟಿಗೆ ಹಬ್ಬಿತೆಂದರೆ, ಎಲ್ಲರೂ ಅವರಿಗೆ ಫೋನ್ ಮಾಡಿ ಶುಭಾಶಯ ಹೇಳುವವರೆ. ಸ್ಪಷ್ಟನೆ ಕೇಳದೆ ಶುಭಾಶಯ ಹೇಳೋಕೆ ಕಾರಣವೂ ಇತ್ತು. ವೈಷ್ಣವಿ ಗೌಡ ಹೆಸರಿನ ಫೇಸ್‍ಬುಕ್ ಖಾತೆಯಲ್ಲೇ ಇಂಥಾದ್ದೊಂದು ಸುದ್ದಿ ಹಬ್ಬಿತ್ತು. ಅದು ವೆರಿಫೈಡ್ ಅನ್ನೋ ಸಿಂಬಲ್‍ನ ರೈಟ್ ಮಾರ್ಕ್ ಗುರುತಿನ ಖಾತೆಯಾದ್ದರಿಂದ ಅದು ವೈಷ್ಣವಿ ಗೌಡ ಅವರ ಅಧಿಕೃತ ಖಾತೆಯೆಂದೇ ಅಭಿಮಾನಿಗಳು ನಂಬಿಬಿಟ್ಟಿದ್ದರು.

ಈಗ ಅದಕ್ಕೆಲ್ಲ ವೈಷ್ಣವಿ ಗೌಡ ತೆರೆ ಎಳೆದಿದ್ದಾರೆ. ತಾನು ಫೇಸ್‍ಬುಕ್‍ನಲ್ಲಿ ಇಲ್ಲವೇ ಇಲ್ಲ. ಅದು ಯಾರ ಅಕೌಂಟೋ ನನಗೆ ಗೊತ್ತಿಲ್ಲ. ನಾನು ಇರೋದು ಇನ್‍ಸ್ಟಾಗ್ರಾಂನಲ್ಲಿ ಮಾತ್ರ. ದಯವಿಟ್ಟು ನಮ್ಮ ವೈಯಕ್ತಿಕ ಜೀವನಕ್ಕೆ ಇಣುಕಬೇಡಿ. ಮದುವೆ, ನಿಶ್ಚಿತಾರ್ಥದ ಸುದ್ದಿಗಳೆಲ್ಲ ವದಂತಿ. ಅದೆಲ್ಲವೂ ಸುಳ್ಳು ಎಂದಿದ್ದಾರೆ ವೈಷ್ಣವಿ ಗೌಡ.

ಚಂದನ್ ಶೆಟ್ಟಿ ಕೂಡಾ ಪ್ರತಿಕ್ರಿಯೆ ನೀಡಿ, ವೈಷ್ಣವಿ ಗೌಡ ನನಗೆ ವೈಯಕ್ತಿಕವಾಗಿ ಪರಿಚಯ ಕೂಡಾ ಇಲ್ಲ. ಧಾರಾವಾಹಿಯಲ್ಲಿ ನೋಡಿದ್ದೇನಷ್ಟೆ. ಸದ್ಯಕ್ಕೆ ಈಗ ಸಿಕ್ಕಿರುವ ಯಶಸ್ಸನ್ನು ಬಳಸಿಕೊಂಡು ಇನ್ನಷ್ಟು ಬೆಳೆಯುವ ಯೋಚನೆ ಇದೆ. ಮದುವೆಯ ಬಗ್ಗೆ ಯೋಚಿಸಲೂ ಪುರುಸೊತ್ತಿಲ್ಲ ಎಂದಿದ್ದಾರೆ.

 

#

Rambo 2 Movie Gallery

https://www.chitraloka.com/movie-reviews/17656-rambo-2-movie-review-chitraloka-rating-3-5-5.html

Raja Loves Radhe Movie Gallery