` ಪ್ರೇಮ ಬರಹ ಚಿತ್ರಕ್ಕೆ ಸಾಧು ಕೋಕಿಲ  ಮೆಚ್ಚುಗೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sadhu kokila impressed with prema baraha
Prema Baraha

ಪ್ರೇಮ ಬರಹ, ಅರ್ಜುನ್ ಸರ್ಜಾ ನಿರ್ದೇಶನದ, ಅರ್ಜುನ್ ಸರ್ಜಾ ಮಗಳು ಐಶ್ವರ್ಯಾ ಸರ್ಜಾ ಅಭಿನಯದ ಚಿತ್ರ. ಮೇಲ್ನೋಟಕ್ಕೆ ಲವ್‍ಸ್ಟೋರಿ ಎನ್ನಿಸಿದರೂ, ಚಿತ್ರದ ಫೀಲ್ ಬೇರೆಯೇ ಇದೆ. ಖಂಡಿತಾ ಇದು ಮಾಮೂಲಿ ಸಿನಿಮಾ ಅಲ್ಲ. ಇದು ಸಂಗೀತ ನಿರ್ದೇಶಕ ಸಾಧು ಕೋಕಿಲ, ಪ್ರೇಮಬರಹಕ್ಕೆ ನೀಡಿರುವ ಮೆಚ್ಚುಗೆ.

ಕಾಮಿಡಿಯನ್ ಆಗಿ ಬ್ಯುಸಿಯಾಗಿರುವ ಸಾಧು ಅವರ ಹಿನ್ನೆಲೆ ಸಂಗೀತಕ್ಕೆ ಚಿತ್ರರಂಗದಲ್ಲಿ ತುಂಬಾನೇ ಬೇಡಿಕೆ ಇದೆ. ಅವರು ಕನ್ನಡದ ದಿ ಬೆಸ್ಟ್ ಹಿನ್ನೆಲೆ ಸಂಗೀತ ನಿರ್ದೇಶಕರೂ ಹೌದು. ಅಂಥಾ ಸಂಗೀತ ನಿರ್ದೇಶಕರಿಗೂ ರೀ-ರೆಕಾರ್ಡಿಂಗ್‍ಗೆ ಕುಳಿತ ತಕ್ಷಣ ಇದು ಮಾಮೂಲಿ ಸಿನಿಮಾ ಅಲ್ಲ ಅನ್ನಿಸೋಕೆ ಶುರುವಾಗಿದೆ. ಅದು ಸಾಧು ಅವರ ಕೈಗೆ ಬರುವ ಮುನ್ನ, ಮೂರು ಜನ ಟ್ರೈ ಮಾಡಿ ಬಿಟ್ಟುಹೋಗಿದ್ದ ಸಿನಿಮಾ. ಅದನ್ನು ಚಾಲೆಂಜ್ ಆಗಿಯೇ ಸ್ವೀಕರಿಸಿದ ಸಾಧು, ಪ್ರತಿ ದೃಶ್ಯವನ್ನೂ ಇಷ್ಟಪಟ್ಟು ಸಂಗೀತ ಕೊಟ್ಟಿದ್ದೇನೆ. ಅರ್ಜುನ್ ತಮಗೆ ಸರಿ ಎನ್ನಿಸುವ ತನಕ, ಬಿಡುವುದೇ ಇಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ, ನಾನು ಹಿನ್ನೆಲೆ ಸಂಗೀತ ನೀಡಿರುವ ಚಿತ್ರಗಳಲ್ಲಿ ಇದು ಒಂದು ಬೆಸ್ಟ್ ಸಿನಿಮಾ ಎಂದಿದ್ದಾರೆ.

ಅಂದಹಾಗೆ ಚಿತ್ರಕ್ಕೆ ಸಂಗೀತ ನಿರ್ದೇಶನ ಜೆಸ್ಸಿ ಗಿಫ್ಟ್ ಅವರದ್ದು. ಹಿನ್ನೆಲೆ ಸಂಗೀತದ ಹೊಣೆಯಷ್ಟೇ ಸಾಧು ಕೋಕಿಲ ಅವರದ್ದು. ಚಿತ್ರದ ಹಾಡುಗಳು ಜನಪ್ರಿಯವಾಗುತ್ತಿವೆ. ಸಿನಿಮಾ ಇದೇ ವಾರ ತೆರೆ ಕಾಣುತ್ತಿದೆ.

 

#

Rambo 2 Movie Gallery

https://www.chitraloka.com/movie-reviews/17656-rambo-2-movie-review-chitraloka-rating-3-5-5.html

Raja Loves Radhe Movie Gallery