` ಮಂಡ್ಯ ಸೀಮೆಯ ಪ್ರೀತಿ-ದ್ವೇಷದ ರಘುವೀರ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
raghuveera is about mandya's love hate story
Raghuveera Movie Image

ಮಂಡ್ಯದ ಜನ ಪ್ರೀತಿಗೆ ಹೆಸರಾದವರು. ಸಕ್ಕರೆಯಷ್ಟೇ ಸಿಹಿ ವ್ಯಕ್ತಿತ್ವದವರು. ಪ್ರೀತಿಯಲ್ಲಷ್ಟೇ ದ್ವೇಷದಲ್ಲೂ ಕೂಡಾ ಮಂಡ್ಯದಲ್ಲಿ ವಿಚಿತ್ರ ಕಥೆಗಳು ಸಿಗುತ್ತವೆ. ಅಂಥಾದ್ದೊಂದು ಸತ್ಯಕತೆಯ ಸುತ್ತ ಹೆಣೆದಿರುವ ಪ್ರೇಮಕಥೆಯೇ ರಘುವೀರ.

ಈ ವಾರ ತೆರೆಗೆ ಬರುತ್ತಿರುವ ಚಿತ್ರದಲ್ಲಿ ಮಂಡ್ಯ ಸೀಮೆಯ ರಗಡ್ ಪ್ರೇಮಕಥೆಯೊಂದು ಚಿತ್ರವಾಗಿ ಅರಳಿದೆ. 3 ವರ್ಷ ಜೋಡಿಹಕ್ಕಿಯಂತೆ ಹಾರಾಡಿಕೊಂಡಿದ್ದ ಜೋಡಿ, ಹೇಗೆ ದ್ವೇಷ, ಜಾತಿ, ಮೌಢ್ಯದ ಅಫೀಮಿಗೆ ಸಿಕ್ಕು ಪ್ರೇಮಿಗಳನ್ನು ಹಿಂಸಿಸುತ್ತಾರೆ ಎನ್ನುವುದೇ ಚಿತ್ರದ ಕಥೆ.

ಚಿತ್ರದ ನಾಯಕಿ ಧೇನು ಅಚ್ಚಪ್ಪ, ಚಿತ್ರದ ನಿರ್ಮಾಪಕಿಯೂ ಹೌದು. ಕಥೆ, ಚಿತ್ರಕಥೆ, ಸಂಭಾಷಣೆ ಸೂರ್ಯ ಸತೀಶ್ ಎಂಬ ಯುವಕನದ್ದು. ಅಂದಹಾಗೆ ಇಡೀ ಚಿತ್ರದ ಕಥೆ ನಿರೂಪಿಸಿರುವುದು ಜಿಮ್ ರವಿ. ಜಿಮ್ ರವಿಯವರ ಪ್ರೇಮಕಥೆ ನೆನಪಿದೆ ತಾನೇ.. ಚಿತ್ರವನ್ನು ನಿರೂಪಿಸುವುದೇ ಅವರು. 

ಈ ವಾರ ತೆರೆಗೆ ಬರುತ್ತಿರುವ ಚಿತ್ರದಲ್ಲಿ ರಘುವೀರ ಚಿತ್ರ ವಿಭಿನ್ನವಾಗಿ ನಿಲ್ಲುವ ಪ್ರಯತ್ನದಲ್ಲಿದೆ. ಹೊಸಬರ ವಿಭಿನ್ನ ಪ್ರಯತ್ನಕ್ಕೆ ಶುಭ ಹಾರೈಸುವ ಜವಾಬ್ದಾರಿ ಪ್ರೇಕ್ಷಕರದ್ದು.

#

Rambo 2 Movie Gallery

https://www.chitraloka.com/movie-reviews/17656-rambo-2-movie-review-chitraloka-rating-3-5-5.html

Asathoma Sadgamaya Movie Gallery