Print 
kiccha sudeepa fan, sudeep fan,

User Rating: 0 / 5

Star inactiveStar inactiveStar inactiveStar inactiveStar inactive
 
sudeep is speechless over his 82 year old fan
Sudeep, 82 Year Old fan of Sudeep

ಕಿಚ್ಚ ಸುದೀಪ್‍ಗೆ ಅಭಿಮಾನಿಗಳ ಸಂಖ್ಯೆ ಕಡಿಮೆಯೇನಲ್ಲ. ಸುದೀಪ್‍ಗೆ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಅಭಿಮಾನಿಗಳಿದ್ದಾರೆ. ಅದು ಈಗ ಮತ್ತೊಮ್ಮೆ ಸಾಬೀತಾಗಿದೆ. ಅಂತಹ ಒಬ್ಬರು ಹಿರಿಯ ಅಭಿಮಾನಿಯೊಬ್ಬರು ಸುದೀಪ್ ಅವರನ್ನು ಮನೆಗೆ ಆಹ್ವಾನಿಸಿದ್ದಾರೆ.

ಅವರೋ 82 ವರ್ಷದ ಅಜ್ಜಿ. ಸುದೀಪ್ ಅವರು ಚಿತ್ರರಂಗಕ್ಕೆ ಬಂದು 22 ವರ್ಷವಾದ ಹಿನ್ನೆಲೆಯಲ್ಲಿ ಶುಭ ಹಾರೈಸಿರುವ ಅವರು ``ನೀವೆಂದರೆ ನಮಗಿಷ್ಟ. ಸ್ವಂತ ಪರಿಶ್ರಮದಿಂದ ಒಳ್ಳೆಯ ಸಾಧನೆ ಮಾಡಿದ್ದೀರಿ. ನಿಮ್ಮ ಕುಟುಂಬ, ತಂದೆ ತಾಯಿಯರನ್ನೂ ಚೆನ್ನಾಗಿ ನೋಡಿಕೊಳ್ಳುತ್ತಿದ್ದೀರಂತೆ. ಸಮಾಜಕ್ಕೂ ಒಳ್ಳೆಯ ಕೆಲಸ ಮಾಡುತ್ತಿದ್ದೀರಂತೆ. ಒಂದ್ಸಲ ಬಿಡುವು ಮಾಡಿಕೊಂಡು ಮನೆಗೆ ಬನ್ನಿ'' ಹೀಗೆ ಹೇಳಿರುವ ಪುಟ್ಟ ವಿಡಿಯೋವೊಂದನ್ನು ಸುದೀಪ್‍ಗೆ ಕಳುಹಿಸಿಕೊಟ್ಟಿದ್ದಾರೆ ಆ ಅಜ್ಜಿ.

ಅಂಥಾದ್ದೊಂದು ಅಭಿಮಾನಕ್ಕೆ ಸುದೀಪ್ ಮೂಕವಿಸ್ಮಿತರಾಗದೆ ಬೇರೆ ಮಾರ್ಗವಾದರೂ ಏನಿತ್ತು..? ಖಂಡಿತಾ ಬರುತ್ತೇನೆ, ನಿಮ್ಮ ಆಶೀರ್ವಾದವೇ ನನ್ನ ಸಂಪಾದನೆ ಎಂದು ಪ್ರತಿಕ್ರಿಯಿಸಿದ್ದಾರೆ ಕಿಚ್ಚ ಸುದೀಪ್.