` ಟಾಕೀಸ್‍ನ ಕತ್ತಲಲ್ಲಿ ಕದ್ದುಮುಚ್ಚಿ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
haripriya watched jaisimha in disguise
Haripriya Image

ಗುಬ್ಬಚ್ಚಿ ಗೂಡಿನಲ್ಲಿ ಕದ್ದುಮುಚ್ಚಿ.. ಕುಚ್ಚಿಕುಚ್ಚಿ ಮಾಡೋದು ಗೊತ್ತಿದೆ. ಆದರೆ, ಇದೇನಿದು ಟಾಕೀಸ್ ಕತ್ತಲಲ್ಲಿ ಕದ್ದುಮುಚ್ಚಿ.. ಅದನ್ನು ನೀವು ಹರಿಪ್ರಿಯಾ ಅವರನ್ನೇ ಕೇಳಬೇಕು. ನಿಮಗೆ ಗೊತ್ತಿದೆ. ಸ್ಟಾರ್‍ಗಳು ಸಿನಿಮಾ ಮಾಡಬಹುದು, ಅಭಿಮಾನಿಗಳನ್ನು ರಂಜಿಸಬಹುದು. ಆದರೆ, ಅದೇ ಅಭಿಮಾನಿಗಳ ಮಧ್ಯೆ ಕುಳಿತು ನೆಮ್ಮದಿಯಾಗಿ ಸಿನಿಮಾ ನೋಡುವುದು ಅವರ ಹಣೆಬರಹದಲ್ಲಿ ಇಲ್ಲ. ಅದಕ್ಕೆ ಹರಿಪ್ರಿಯಾ ಕೂಡಾ ಹೊರತಲ್ಲ.

ತೆಲುಗಿನಲ್ಲಿ ಅವರ ಅಭಿನಯದ ಜೈಸಿಂಹ ಚಿತ್ರ ರಿಲೀಸ್ ಆಗಿದೆ. ಬಾಲಕೃಷ್ಣ ಜೊತೆ ನಟಿಸಿರುವ ಆ ಚಿತ್ರ ಬಾಕ್ಸಾಫೀಸ್‍ನಲ್ಲಿ ಸದ್ದು ಮಾಡುತ್ತಿದೆ. ಆದರೆ, ಆ ಚಿತ್ರವನ್ನು ಥಿಯೇಟರ್‍ನಲ್ಲಿ, ಅಭಿಮಾನಿಗಳ ಮಧ್ಯೆಯೇ ನೋಡಬೇಕು ಎಂದು ಆಸೆಯಾದಾಗ.. ಹರಿಪ್ರಿಯಾ ಕದ್ದುಮುಚ್ಚಿ ಮಾರುವೇಷದಲ್ಲಿ ಹೋಗಬೇಕಾಯ್ತು. ಮುಂಜಾಗ್ರತೆ ವಹಿಸಿದ್ದ ಹರಿಪ್ರಿಯಾ, ಮೈತುಂಬಾ ಶಾಲು ಹೊದ್ದು, ಮುಖ ಕಾಣದಂತೆ ಟೋಪಿ ಹಾಕಿಕೊಂಡು ಥಿಯೇಟರಿಗೆ ನಡೆದೇಬಿಟ್ಟರು. ಮಧ್ಯೆ ಆತಂಕ ಇದ್ದೇ ಇತ್ತು. ಅಕಸ್ಮಾತ್.. ಯಾರಾದರೂ ಒಬ್ಬರೇ ಒಬ್ಬರು ಗುರುತಿಸಿಬಿಟ್ಟರೂ.. ಸಿನಿಮಾ ನೋಡುವ, ಎಂಜಾಯ್ ಮಾಡುವ ಖುಷಿ ಹೋದಂತೆಯೇ ಲೆಕ್ಕ. ಸಿನಿಮಾದಲ್ಲಿ ನಟಿಸುವ ಅವರಿಗೆ ಥಿಯೇಟರ್‍ನಲ್ಲಿ ಅಜ್ಜಿಯಂತೆ ನಟಿಸುವುದೇನೂ ಕಷ್ಟವಾಗಲಿಲ್ಲ.

`ನನ್ನ ಎಂಟ್ರಿ ಸೀನ್ ಬಂದಾಗ ಜನ ಶಿಳ್ಳೆ ಹೊಡೆದು ಸಂಭ್ರಮಿಸಿದ್ದನ್ನು, ಜನರ ಮಧ್ಯೆಯೇ ಕುಳಿತು ನೋಡಿದಾಗ ಆದ ಥ್ರಿಲ್ಲೇ ಬೇರೆ. ನಮ್ಮ ಪ್ರೇಕ್ಷಕರ ರಿಯಾಕ್ಷನ್ ಯಾವತ್ತೂ ಅದ್ಭುತ ಖುಷಿ ಕೊಡುತ್ತೆ' ಎಂದು ಹೇಳಿಕೊಂಡಿದ್ದಾರೆ ಹರಿಪ್ರಿಯಾ. 

ಅಭಿಮಾನಿಗಳಿಗೆ ವಿಶೇಷ ಸೂಚನೆ : ಮುಂದಿನ ವಾರ ಚಿರಂಜೀವಿ ಸರ್ಜಾ ನಾಯಕರಾಗಿರುವ, ಹರಿಪ್ರಿಯಾ ನಾಯಕಿಯಾಗಿರುವ ಸಂಹಾರ ಚಿತ್ರ ಬಿಡುಗಡೆಯಾಗುತ್ತಿದೆ. ಯಾವ ಥಿಯೇಟರ್‍ನಲ್ಲಿ ಮಾಸ್ಕ್ ಹಾಕ್ಕೊಂಡು ನಿಮ್ಮ ಮಧ್ಯೆಯೇ ಕುಳಿತುಕೊಳ್ತಾರೋ.. ಯಾರಿಗ್ಗೊತ್ತು. 

 

 

Rambo 2 Movie Gallery

https://www.chitraloka.com/movie-reviews/17656-rambo-2-movie-review-chitraloka-rating-3-5-5.html

Raja Loves Radhe Movie Gallery