` `ತಾಯಿಗೆ ತಕ್ಕ ಮಗ'ನಿಗೆ ಶಶಾಂಕ್‍ರದ್ದೇ ಡೈರೆಕ್ಷನ್..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
shashank itself to direct thayige thakka maga
Shashank, Thayige Thakka Maga Image

ನಿರ್ದೇಶಕ ಶಶಾಂಕ್, ನಿರ್ಮಾಪಕರಾಗಿ ಆರಂಭಿಸಿದ್ದ ಮೊದಲ ಚಿತ್ರ ತಾಯಿಗೆ ತಕ್ಕ ಮಗ. ಆದರೆ, ನಿರ್ದೇಶನದ ಹೊಣೆಯನ್ನು ಬೇರೊಬ್ಬರಿಗೆ ಬಿಟ್ಟಿದ್ದರು. ಅಜಯ್ ರಾವ್, ಆಶಿಕಾ ರಂಗನಾಥ್ ಹಾಗೂ ಸುಮಲತಾ ಪ್ರಮುಖ ಪಾತ್ರದಲ್ಲಿರುವ ಚಿತ್ರವನ್ನು ರಘು ಕೋವಿ ನಿರ್ದೇಶಿಸಬೇಕಿತ್ತು. ನಂತರ ಅವರು ಬದಲಾಗಿ, ಅವರ ಜಾತಕ್ಕೆ ವೇದ್‍ಗುರು ಬಂದರು. ಈಗ ಅವರ ಬದಲಾಗಿ ಸ್ವತಃ ಶಶಾಂಕ್ ಅವರೇ ನಿರ್ದೇಶನದ ಹೊಣೆ ಹೊತ್ತಿದ್ದಾರೆ.

ವೇದ್‍ಗರು ಅನಾರೋಗ್ಯದಿಂದಾಗಿ ಚಿತ್ರ ಮುಂದುವರಿಸಲು ಸಾಧ್ಯವಾಗಲಿಲ್ಲ. ಇದರ ಮಧ್ಯೆ ಪುನೀತ್ ರಾಜ್‍ಕುಮಾರ್ ಚಿತ್ರ ಸ್ವಲ್ಪ ಮುಂದಕ್ಕೆ ಹೋಗಿದೆ. ಹೀಗಾಗಿ ಚಿತ್ರವನ್ನು ನಾನೇ ನಿರ್ದೇಶಿಸಲು ಮುಂದಾಗಿದ್ದೇನೆ ಅನ್ನೊದು ಶಶಾಂಕ್ ಮಾತು.

ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ, ತಾಯಿಗೆ ತಕ್ಕ ಮಗ ಚಿತ್ರದ ವೇಳೆಯಲ್ಲೇ ಪುನೀತ್ ರಾಜ್‍ಕುಮಾರ್ ಅಭಿನಯದ ಚಿತ್ರವೂ ಸೆಟ್ಟೇರಬೇಕಿತ್ತು.

Sagutha Doora Doora Movie Gallery

Popcorn Monkey Tiger Movie Gallery