` ನೀನಾಸಂ ಸತೀಶ್ ಕಾರ್ ಆ್ಯಕ್ಸಿಡೆಂಟ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sathish ninasam's car accident
Sathish Ninasam's car meets with an accident

ನೀನಾಸಂ ಸತೀಶ್‍ಗೆ ಇತ್ತೀಚೆಗೆ ಅಪಘಾತಗಳು ಬೆನ್ನತ್ತಿದಂತಿವೆ. ಟೈಗರ್ ಗಲ್ಲಿ ಚಿತ್ರದ ಚಿತ್ರೀಕರಣ ವೇಳೆ ಸಾಹಸ ದೃಶ್ಯದ ಚಿತ್ರೀಕರಣದಲ್ಲಿ ಅಪಘಾತಕ್ಖಿಡಾಗಿದ್ದ ಸತೀಶ್, ಈ ಬಾರಿ ಮತ್ತೊಂದು ಅಪಾಯದಿಂದ ಪಾರಾಗಿದ್ದಾರೆ. ಮಂಡ್ಯ ಬಳಿ ನೀನಾಸಂ ಸತೀಶ್ ಅವರ ಕಾರು ಅಪಘಾತಕ್ಕೀಡಾಗಿದೆ.

ಅದೃಷ್ಟವಶಾತ್, ನೀನಾಸಂ ಸತೀಶ್ ಕೊನೆಯ ಕ್ಷಣದಲ್ಲಿ ಕಾರ್ ಹತ್ತಿರಲಿಲ್ಲ. ಬದಲಿಗೆ ಕಾರ್‍ನಲ್ಲಿ ಸತೀಶ್ ಅವರ ಮೇಕಪ್ ಮ್ಯಾನ್, ಚಾಲಕ ಹಾಗೂ ಕೆಲವು ಸ್ನೇಹಿತರಿದ್ದರು. ಅವರಿಗೂ ಸಣ್ಣ ಪುಟ್ಟ ಗಾಯಗಳಾಗಿವೆ. ಯಾರಿಗೂ ಪ್ರಾಣಾಪಾಯವಾಗಿಲ್ಲ.

ಅಯೋಗ್ಯ ಚಿತ್ರದ ಶೂಟಿಂಗ್‍ಗಾಗಿ ಮಂಡ್ಯದಲ್ಲಿರುವ ನೀನಾಸಂ ಸತೀಶ್, ತಕ್ಷಣ ಜೊತೆಯಲ್ಲಿದ್ದವರ ಆರೋಗ್ಯ ವಿಚಾರಿಸಿದ್ದಾರೆ. ಜೊತೆಗಾರರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. 

 

Rambo 2 Movie Gallery

https://www.chitraloka.com/movie-reviews/17656-rambo-2-movie-review-chitraloka-rating-3-5-5.html

Raja Loves Radhe Movie Gallery